
ARREST: ಸೋಶಿಯಲ್ ಮೀಡಿಯಾದಲ್ಲಿ ದೇವರ ಬಗ್ಗೆ ಅಶ್ಲೀಲ ಕಮೆಂಟ್: ಆರೋಪಿ ಬಂಧನ
Thursday, August 3, 2023
ಮಂಗಳೂರು: ಸೋಶಿಯಲ್ ಮೀಡಿಯಾ ಇನ್ಸ್ ಸ್ಟಾ ಗ್ರಾಂನಲ್ಲಿ
ಹಿಂದು ದೇವರ ಬಗ್ಗೆ ಆಶ್ಲೀಲವಾಗಿ ಬರೆದು ಕಮೆಂಟ್ ಮಾಡಿದ ಆರೋಪಿಯನ್ನು ಮಂಗಳೂರಿನ ಸೈಬರ್ ಇಕೋನಾಮಿಕ್
ಆ್ಯಂಡ್ ನಾರ್ಕೋಟಿಕ್ ಕ್ರೈಂ ಪೊಲೀಸ್ ಠಾಣೆ ( ಸೆನ್) ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಕುಲಶೇಖರದ ಬಿಕರ್ನಕಟ್ಟೆ ಬಳಿಯ ಮೊಹಮ್ಮದ್ ಸಲ್ಮಾನ್ (22) ಬಂಧಿತ ಆರೋಪಿ. ಈತ ಇನ್ಸ್ಟಾ ಗ್ರಾಂ ನಲ್ಲಿ, ಹಿಂದು ದೇವರ ಬಗ್ಗೆ ಅಶ್ಲೀಲವಾಗಿ ಬರೆದು ಕಮೆಂಟ್ ಮಾಡಿದ ಬಗ್ಗೆ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಯಾದ ಮೊಹಮ್ಮದ್ ಸಲ್ಮಾನ್ ಪೊಲೀಸರು ಬಂಧಿಸಿದ್ದಾರೆ. ಪತ್ತೆ ಕಾರ್ಯದಲ್ಲಿ ಮಂಗಳೂರು ನಗರ ಸನ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಸತೀಶ್ ಎಂ ಪಿ ರವರ ನೇತೃತ್ವದಲ್ಲಿ, ಸೆನ್ ಕ್ರೈಂ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.