-->
KARVAR NEWS: ಕಾರವಾರ ಸಮೀಪ ಮೊಬೈಲ್ ಚಾರ್ಜರ್ ಬಾಯಿಗೆ ಇಟ್ಟು ವಿದ್ಯುತ್ ಶಾಕ್ ನಿಂದ 8 ತಿಂಗಳ ಮಗು ಸಾವು

KARVAR NEWS: ಕಾರವಾರ ಸಮೀಪ ಮೊಬೈಲ್ ಚಾರ್ಜರ್ ಬಾಯಿಗೆ ಇಟ್ಟು ವಿದ್ಯುತ್ ಶಾಕ್ ನಿಂದ 8 ತಿಂಗಳ ಮಗು ಸಾವು

 


ಸ್ವಿಚ್ ಬೋರ್ಡಿಗೆ ಹಾಕಿದ್ದ ಮೊಬೈಲ ಚಾರ್ಜರ್ ವೈಯರ್ ಒಂದನ್ನು ಮಗುವೊಂದು ಬಾಯಿಗಿಟ್ಟ ಪರಿಣಾಮ ವಿದ್ಯುತ್ ಪ್ರವಹಿಸಿದ ಘಟನೆ ನಡೆದಿದ್ದು, ಇದರಿಂದ ಮಗು ಸಾವನ್ನಪ್ಪಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸಮೀಪ ಸಿದ್ಧರ ಎಂಬಲ್ಲಿ ಮಂಗಳವಾರ ಬೆಳಗ್ಗೆ ಈ ಘಟನೆ ನಡೆದಿದೆ.

ಸಾನಿಧ್ಯ ಕಲ್ಲುಟಕರ್ (8 ತಿಂಗಳು) ಸಾವನ್ನಪ್ಪಿದ ಮಗು. ಹೆಸ್ಕಾಂ ನಲ್ಲಿ ಗುತ್ತಿಗೆ ನೌಕರನಾಗಿ ಕೆಲಸ ನಿರ್ವಹಿಸುತ್ತಿದ್ದ ಮಗುವಿನ ತಂದೆ ಸಂತೋಷ್ ವಿಷಯ ಕೇಳಿ ಅಸ್ವಸ್ತರಾಗಿ ಕುಸಿದು ಬಿದ್ದಿದ್ದು ತಕ್ಷಣ ಸಿದ್ದರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿಸಲಾಗಿದೆ.

ಸಿದ್ದರದ ಸಂತೋಷ ಕಲ್ಗುಟಕರ್, ಸಂಜನಾ ಕಲ್ಗುಟಕರ್ ದಂಪತಿಯ ಎಂಟು ತಿಂಗಳ ಹೆಣ್ಣು ಮಗು ಸಾನಿಧ್ಯ ಕಲ್ಲುಟಕರ್ ಇಂದು ಬೆಳಿಗ್ಗೆ ಮನೆಯಲ್ಲಿ ಸ್ವಿಚ್ ಬೋರ್ಡ್ ಗೆ ಹಾಕಿದ್ದ ಮೊಬೈಲ್ ಚಾರ್ಜರ್ ಬಾಯಿಗಿಟ್ಟಿದೆ. ಚಾರ್ಜರ್ ಅನ್ನು ಹಾಗೆಯೇ ಬಿಟ್ಟಿದ್ದು, ಸ್ವಿಚ್ ಆನ್ ಇತ್ತು. ಮೊಬೈಲಿಗೆ ಚಾರ್ಜರ್ ಸಿಕ್ಕಿಸಿಕೊಂಡು ಇರಲಿಲ್ಲವಾದ ಕಾರಣ, ಅದನ್ನು ಹಿಡಿದ ಮಗು ಹಾಗೆಯೇ ಕುತೂಹಲದಿಂದ ಬಾಯಿಗೆ ಹಾಕಿದೆ. ಈ ಸಂದರ್ಭ ವಿದ್ಯುತ್ ಪ್ರವಹಿಸಿದೆ. ವಿಷಯ ತಿಳಿದ ಕೂಡಲೇ ಮಗುವನ್ನು ಜಿಲ್ಲಾಸ್ಪತ್ರೆಗೆ ಕರೆತರಲಾಯಿತು. ಆದರೆ ಮಗು ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.



ಮಗುವಿನ ಸಾವಿನಿಂದ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದೆ. ಸದ್ಯ ಮೃತ ಮಗುವನ್ನು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಸಂತೋಷ್ ಕಲ್ಗುಟಕರ್ ದಂಪತಿಗೆ ಎರಡನೇ ಮಗುವಾಗಿತ್ತು. ಹಿರಿಯ ಮಗಳ ಹುಟ್ಟುಹಬ್ಬ ಕೂಡ ಇಂದೆ ಇರುವುದರಿಂದ ಎಲ್ಲರು ಹುಟ್ಟು ಹಬ್ಬದ ಆಚರಣೆ ಸಂಭ್ರಮದಲ್ಲಿದ್ದರು. ಈ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ