
Yakshagana: ಕಾಸರಗೋಡಿನಲ್ಲಿ ಸಿರಿಬಾಗಿಲು ಪ್ರತಿಷ್ಠಾನದ ಚಟುವಟಿಕೆ ಶ್ಲಾಘನೀಯ: ಹಾದಿಗಲ್ಲು ಡಾ ಲಕ್ಷ್ಮೀನಾರಾಯಣ
Friday, August 11, 2023
ಸಿರಿಬಾಗಿಲು ಸಾಂಸ್ಕೃತಿಕ ಪ್ರತಿಷ್ಠಾನದಲ್ಲಿ ರಾಮಾಯಣ ಮಹಾಸಾಚರಣೆಯ ಪ್ರಯುಕ್ತ ಯಕ್ಷಗಾನ ತಾಳಮದ್ದಲೆ- ಭಜನೆ -ಪ್ರವಚನ ಕಾರ್ಯಕ್ರಮಕ್ಕೆ ಶ್ರೀ ಅಭಯನೃ ಸಿಂಹ ದೇವಸ್ಥಾನ ,ಹಾದಿಗಲ್ಲು ಧರ್ಮದರ್ಶಿ ಡಾ. ಲಕ್ಷ್ಮೀನಾರಾಯಣ ಹಾದಿಗಲ್ಲು ತಾಲೂಕು ಚಾಲನೆ ನೀಡಿದರು.
ಕಾಸರಗೋಡು ಪ್ರದೇಶವು ಕರ್ನಾಟಕದ ಅವಿಭಾಜ್ಯ ಅಂಗ ಯಾವುದೋ ಕಾರಣದಿಂದ ಕೇರಳ ಪಾಲಾಯಿತು. ಆದರೂ ನಮ್ಮ ಭಾವನೆಗಳಲ್ಲಿ ಕಾಸರಗೋಡು ನಮ್ಮದೇ, ಕರ್ನಾಟಕದ್ದೇ ಎಂಬುದಾಗಿ. ಸಾಂಸ್ಕೃತಿಕ ಸಾಹಿತ್ಯ ಕ್ಷೇತ್ರಕ್ಕೆ ಕಾಸರಗೋಡಿನ ಕೊಡುಗೆ ಮರೆಯಲಸದಳ. ಕೈಯಾರರಂತಹ ಕವಿ ಶ್ರೇಷ್ಠರು ಮೆರೆದ ನಾಡು. ಯಾವುದೇ ವಿಚಾರಕ್ಕೂ ಹಿನ್ನಡೆ ಎಂಬುದೇ ಇಲ್ಲ. ಯಾಕೆಂದರೆ ಸಿರಿಬಾಗಿಲು ಪ್ರತಿಷ್ಠಾನದಂತಹ ಸಾಂಸ್ಕೃತಿಕ ಕನ್ನಡಪರ ಸಂಸ್ಥೆಗಳು ಹತ್ತು ಹಲವು ಚಟುವಟಿಕೆಗಳ ಮೂಲಕ ಸಂಸ್ಕೃತಿಯನ್ನು ಮೆರೆಸುವಂತೆ ಮಾಡುತ್ತಿದೆ. ಶ್ರೀ ಧರ್ಮಸ್ಥಳ ಮೇಳದ ಪ್ರಧಾನ ಭಾಗವತರಾದಂತಹ ರಾಮಕೃಷ್ಣಯ್ಯ ಇವರ ನೇತೃತ್ವದ ಪ್ರತಿಷ್ಠಾನ ಈಗಾಗಲೇ ವಿಶ್ವ ವ್ಯಾಪಕವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಅನನ್ಯ ಫೀಡ್ಸ್ ನ ಗೋವಿಂದ ಭಟ್ ದಿವಾಣ ಹಿರಿಯರಾದ ದಿವಾಣ ಭಿಮ ಭಟ್ಟರು ಮಾರ್ಗದರ್ಶನದಲ್ಲಿ ಬೆಳೆದು ಬಂದವನು. ಉಧ್ಯಮಿ ಯಾಗಿದ್ದರೂ ಯಕ್ಷಗಾನ ಕ್ಕಾಗಿ, ಕಲಾವಿದರಿಗಾಗಿ ಸದಾ ಸಿದ್ದ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ತಲ್ಲೂರು ಶಿವರಾಮ ಶೆಟ್ಟಿ ಸಿರಿಬಾಗಿಲು ಪ್ರತಿಷ್ಠಾನದ ಸಾಂಸ್ಕೃತಿಕ ಭವನದ ಬೆಳವಣಿಗೆಗೆ ಅಚ್ಚರಿ ವ್ಯಕ್ತಪಡಿಸಿದರು. ಇದೊಂದು ಅಧ್ಯಯನ ಯೋಗ್ಯ ಭವನ -ಮ್ಯೂಸಿಯಂ ಅಂತೂ ಅತ್ಯದ್ಭುತವಾಗಿದೆ. ಕಾಸರಗೋಡಿನಲ್ಲಿ ಇಂತಹ ಪ್ರಯತ್ನಗಳಿಂದ ಸಿರಿಬಾಗಲು ಪ್ರತಿಷ್ಠಾನದ ಯೋಜನೆ ಚಾರಿತ್ರಿಕವಾಗಿರಲಿ ಅಂದರು. ಪ್ರತಿಷ್ಠಾನದ ಸಿರಿಬಾಗಿಲು ರಾಮಕೃಷ್ಣ ಮಯ್ಯ ಉಪಸ್ಥಿತರಿದ್ದರು.
ಡಾ. ಶ್ರುತಕೀರ್ತಿರಾಜ್ ಉಜಿರೆ ನಿರೂಪಿಸಿದರು ಲಕ್ಷ್ಮಿನಾರಾಯಣ ಸಂತರಿ ಕಾವು ಮಠ ಉಪಸ್ಥಿತರಿದ್ದರು ಬಳಿಕ ಪ್ರಸಿದ್ಧ ಕಲಾವಿದರಿಂದ ಪಾರ್ತಿಸುಬ್ಬ ವಿರಚಿತ ಪಟ್ಟಾಭಿಷೇಕ ಯಕ್ಷಗಾನ ತಾಳಮದ್ಲೆ ಜರಗಿತು. ಹಿಮ್ಮೇಳ ದಲ್ಲಿ ರಮೇಶ್ ಭಟ್ ಪುತ್ತೂರು, ಮುರಾರಿ ಕಡಂಬಳಿತ್ತಾಯ, ಲಕ್ಮೀಶ ಬೆಂಗ್ರೋಡಿ ಸಹಕರಿಸಿದರೆ,ದಶರಥ ನಾಗಿ ರಾಧಾಕೃಷ್ಣ ಕಲ್ಚಾರ್ ವಿಟ್ಲ, ಕೈಕೇಯಿ ಯಾಗಿ ಹರೀಶ್ ಬಳಂತಿಮೊಗರು, ಮಂಥರೆ ಯಾಗಿ ಬಾಲಕೃಷ್ಣ ಮಣಿಯಾಣಿ ಮವ್ವಾರು, ಶ್ರೀರಾಮ ನಾಗಿ ಶ್ರುತಕೀರ್ತಿರಾಜ್, ಲಕ್ಷ್ಮಣ ನಾಗಿ ಲಕ್ಷ್ಮಣ ಕುಮಾರ್ ಮರಕಡ ಭಾಗವಹಿಸಿದರು.
ಇದಕ್ಕೆ ಮೊದಲು ಕೆನರಾ ಬೇಂಕ್ ನವರು ಪ್ರತಿಷ್ಠಾನಕ್ಕೆ ನೀಡಿದ ಮಹೇಂದ್ರ ಕಂಪೆನಿಯ ಜನರೇಟರ್ ನ್ನು ಕಂಪೆನಿಯ ಸದಸ್ಯರು ಉಪಸ್ಥಿತಿಯಲ್ಲಿ ಶ್ರೀ ಮಧುಕರ ಭಾಗವತರು ಚಾಲನೆ ನೀಡಿದರು.
ಸಂಜೆ 7 ರಿಂದ ಶ್ರೀ ಅಯ್ಯಪ್ಪ ಮಹಿಳಾ ಭಜನಾ ಸಂಘ ಬೆದ್ರಡ್ಕ ಇವರಿಂದ ಭಜನೆ, ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಇವರಿಂದ ಪ್ರವಚನ ನಡೆಯಿತು.