ACCIDENT: ರಿಕ್ಷಾಕ್ಕೆ ಶಾಲಾ ಬಸ್ ಡಿಕ್ಕಿ: ಐವರು ಮೃತ್ಯುವಶ
Monday, September 25, 2023
ಕಾಸರಗೋಡು: ಸೋಮವಾರ ಸಂಜೆ
ನಡೆದ ಭೀಕರ ಅಪಘಾತದಲ್ಲಿ ಐವರು ಸಾವನ್ನಪ್ಪಿದ ಘಟನೆ ಕಾಸರಗೋಡು ಜಿಲ್ಲೆಯ ಬದಿಯಡ್ಕ ಸಮೀಪ ಪಳ್ಳತ್ತಡ್ಕ
ಎಂಬಲ್ಲಿ ನಡೆದಿದೆ.
ಶಾಲಾ
ಮಕ್ಕಳನ್ನು ಬಿಟ್ಟು ಬರುತ್ತಿದ್ದ ಬಸ್ ಮತ್ತು ಆಟೊ ನಡುವೆ ಅಪಘಾತ ಸಂಭವಿಸಿದೆ. ಘಟನೆಯ
ತೀವ್ರತೆಗೆ ಆಟೊ ನಜ್ಜುಗುಜ್ಜಾಗಿದ್ದು, ಆಟೊದಲ್ಲಿದ್ದ ಐವರು ಸಾವನ್ನಪ್ಪಿದ್ದಾರೆ.
ಆಟೊದಲ್ಲಿದ್ದ
ಚಾಲಕ ಸೇರಿ ಐವರು ಪ್ರಯಾಣಿಸುತ್ತಿದ್ದರು. ಸಂಜೆ 5.45ರ ವೇಳೆ ಈ ಅಪಘಾತ ಸಂಭವಿಸಿದೆ.
ವಿದ್ಯಾರ್ಥಿಗಳನ್ನು ಇಳಿಸಿ ಮರಳುತ್ತಿದ್ದ ಶಾಲಾ ಬಸ್ ಮತ್ತು ಆಟೊರಿಕ್ಷಾ ನಡುವೆ ಈ ಅಪಘಾತ
ಸಂಭವಿಸಿದೆ. ಮೃತದೇಹಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.