SPORTS: ಅಕ್ಟೋಬರ್ 15ರಂದು ಅಂತರ್ಜಿಲ್ಲಾ ರಾಪಿಡ್ ಚೆಸ್ ಪಂದ್ಯಾಕೂಟ
ಉಬಾರ್ ಚೆಸ್ ಅಕಾಡಮಿ,
ಉಪ್ಪಿನಂಗಡಿ ವತಿಯಿಂದ ಅಕ್ಟೋಬರ್ 15ರಂದು ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ಸಹಯೋಗ
ಮತ್ತು ಡಿಕೆಸಿಎ(ರಿ) ಸಹಯೋಗದೊಂದಿಗ್ಎ ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯದಲ್ಲಿ
ಅಂತರ್ಜಿಲ್ಲಾ ರಾಪಿಡ್ ಚೆಸ್ ಪಂದ್ಯಾಕೂಟ ಉಬಾರ್ ಚೆಸ್ ಟ್ರೋಫಿ ಕ್ರೀಡಾಕೂಟ ನಡೆಯಲಿದೆ ಎಂದು
ಜಗನ್ನಾಥ ಅಡಪ ತಿಳಿಸಿದ್ದಾರೆ.
ಚೆಸ್ ಕೂಟ 8,
10, 12, 15 ಮತ್ತು 16 ವರ್ಷದೊಳಗಿನ ಹುಡುಗ, ಹುಡುಗಿಯರಿಗೆ 15 ಟ್ರೋಫಿಗಳಿಗಾಗಿ ನಡೆಯಲಿದೆ.
ಕಿರಿಯ ಆಟಗಾರರಿಗೂ ಟ್ರೋಫಿ ಇರಲಿದೆ. ಓಪನ್ ವಿಭಾಗದಲ್ಲಿ 4 ಸಾವಿರ ರೂ, 3, 2, 1 ಸಾವಿರ ರೂಗಳು
ಪ್ರಥಮ ನಾಲ್ಕು ಸ್ಥಾನಿಗಳಿಗಿದ್ದರೆ, ಐದು, ಆರು, ಏಳನೇ ಸ್ಥಾನಿಗಳಿಗೆ 800 ರೂ, 750 ರೂ, 600
ರೂ ಬಹುಮಾನವಿರಲಿದೆ. ಅಲ್ಲದೆ, ಬೆಸ್ಟ್ ಮಹಿಳೆ, ಬೆಸ್ಟ್ ಹಿರಿಯ ಕ್ರೀಡಾಪಟುಗಳಿಗೂ ನಗದು
ಬಹುಮಾನವಿರಲಿದೆ. ಪ್ರವೇಶಶುಲ್ಕ (ಮುಕ್ತ
ವಿಭಾಗಕ್ಕೆ 650 ರೂ ಮತ್ತು 16ರೊಳಗಿನ ಇತರ ವಿಭಾಗಗಳಿಗೆ 550 ರೂಗಳನ್ನು ವಿಧಿಸಲಾಗಿದೆ. ಅಕ್ಟೋಬರ್
13ರೊಳಗೆ ಪ್ರವೇಶಾತಿ ಮಾಡಬೇಕಾಗಿದೆ. ಅದರ ಲಿಂಕ್
ಇಲ್ಲಿದೆ: https://chessfee.com/tmt_details.php?id=768
( www.chessfee.com)