ARREST: ಕ್ರಿಮಿನಲ್ ಹಿನ್ನೆಲೆಯಲ್ಲಿ ಕುಖ್ಯಾತನಾಗಿದ್ದ ಆರೋಪಿ ಸೆರೆಹಿಡಿದ ಮಂಗಳೂರು ಸಿಸಿಬಿ
ಮಂಗಳೂರು: ಹಲವು
ಪ್ರಕರಣಗಳಲ್ಲಿ
ಭಾಗಿಯಾಗಿ
ನ್ಯಾಯಾಲಯಕ್ಕೆ
ವಿಚಾರಣೆ
ಸಮಯ ಹಾಜರಾಗದೇ ಸುಮಾರು 7 ತಿಂಗಳುಗಳಿಂದ
ತಲೆಮರೆಸಿಕೊಂಡಿದ್ದ
ಕುಖ್ಯಾತ
ಆರೋಪಿಯೋರ್ವನನ್ನು
ಮಂಗಳೂರು
ಸಿಸಿಬಿ
ಪೊಲೀಸರು
ವಶಕ್ಕೆ
ಪಡೆದುಕೊಂಡು
ಮುಂದಿನ
ಕ್ರಮಕ್ಕಾಗಿ
ಮಂಗಳೂರು
ಗ್ರಾಮಾಂತರ
ಪೊಲೀಸ್
ಠಾಣೆಗೆ
ಹಸ್ತಾಂತರಿಸಿರುತ್ತಾರೆ.
ಹಲ್ಲೆ,
ಕೊಲೆಯತ್ನ,
ಅಪಹರಣ,
ಹಫ್ತಾ
ವಸೂಲಿ,
ದರೋಡೆ,
ಕೊಲೆ ಸಹಿತ ಹಲವಾರು
ಪ್ರಕರಣಗಳಲ್ಲಿ
ಭಾಗಿಯಾಗಿ
ನ್ಯಾಯಾಲಯದಿಂದ
ಜಾಮೀನಿನಲ್ಲಿ
ಬಿಡುಗಡೆಗೊಂಡ
ಬಳಿಕ ನ್ಯಾಯಾಲಯಕ್ಕೆ ವಿಚಾರಣೆ ಸಮಯ ಹಾಜರಾಗದೇ
ತಲೆಮರೆಸಿಕೊಂಡಿದ್ದ
ತಲ್ಲತ್ ಫೈಸಲ್ ನಗರ (39) ಆರೋಪಿ.ಈತ
ಬಜಾಲ್ ಫೈಸಲ್ ನಗರ ನಿವಾಸಿಯಾಗಿದ್ದಾನೆ.
ಈತನನ್ನು ವಶಕ್ಕೆ
ಪಡೆದುಕೊಂಡು
ಮುಂದಿನ
ಕ್ರಮಕ್ಕಾಗಿ
ಮಂಗಳೂರು
ಗ್ರಾಮಾಂತರ
ಪೊಲೀಸ್
ಠಾಣೆಗೆ
ಹಸ್ತಾಂತರಿಸಲಾಗಿರುತ್ತದೆ.
ಈತನು 2004 ನೇ ಇಸವಿಯಲ್ಲಿ
ಹಲ್ಲೆ
ಪ್ರಕರಣದಲ್ಲಿ
ಭಾಗಿಯಾಗಿ
ಅಪರಾಧ
ಚಟುವಟಿಕೆಯಲ್ಲಿ
ಭಾಗಿಯಾಗಿದ್ದ.
ನಂತರ ಮಂಗಳೂರು ಗ್ರಾಮಾಂತರ, ಕಂಕನಾಡಿ ನಗರ, ಕೊಣಾಜೆ,
ಬರ್ಕೆ,
ಮುಂಬೈ
ಮುಂತಾದ
ಕಡೆಗಳಲ್ಲಿ
ಹಲ್ಲೆ,
ಜೀವ ಬೆದರಿಕೆ, ಹಫ್ತಾ ವಸೂಲಿ,
ದರೋಡೆ,
ಕೊಲೆ ಯತ್ನ, ಕೊಲೆ,
ಕರ್ತವ್ಯದಲ್ಲಿದ್ದ
ಪೊಲೀಸರ
ಮೇಲೆ ಹಲ್ಲೆ, ಅಪಹರಣ
ಹೀಗೆ ಒಟ್ಟು 28 ಪ್ರಕರಣಗಳಲ್ಲಿ ಭಾಗಿಯಾಗಿದ್ದಾಗಿ ಪೊಲೀಸರು ತಿಳಿಸಿದ್ದಾರೆ.