FRAUD: 25 ಲಕ್ಷ ಗೆದ್ದಿದ್ದೀರಿ ಎಂದು ಕರೆ ಮಾಡಿ ವಂಚನೆ!!
Wednesday, September 20, 2023
ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ 25 ಲಕ್ಷ ರೂ ಗೆದ್ದಿರುವುದಾಗಿ ಹೇಳಿ ಮಹಿಳೆಯೊಬ್ಬರನ್ನು ವಂಚಿಸಿದ ಪ್ರಕರಣವೊಂದು ಪುತ್ತೂರಿನಲ್ಲಿ ವರದಿಯಾಗಿದೆ.
ಪುತ್ತೂರು ನಿವಾಸಿ ಮಹಿಳೆಗೆ 2022ನೇ ಮೇ ತಿಂಗಳಲ್ಲಿ ಅಪರಿಚಿತ ವ್ಯಕ್ತಿ
ವಾಟ್ಸಾಪ್ ಕರೆ ಮಾಡಿ ತಾನು ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಿಂದ ಕರೆ ಮಾಡುತ್ತಿರುವುದಾಗಿ ಹೇಳಿ
25 ಲಕ್ಷ ರೂ ಲಾಟರಿ ಗೆದ್ದಿದ್ದೀರಿ ಎಂದಿದ್ದಾನೆ. ಅನಂತರ ತೆರಿಗೆ ಇನ್ನಿತರ ಶುಲ್ಕಗಳಾಗುತ್ತವೆ ಎಂದು
ಹೇಳಿ 2022ರ ಮೇ ತಿಂಗಳಿಂದ 2023ರ ಸೆ.13ರವರೆಗೆ ವಿವಿಧ ಬ್ಯಾಂಕ್ ಖಾತೆಗಳಿಗೆ 12,93,200 ರೂಗಳನ್ನ
ವರ್ಗಾಯಿಸಿಕೊಂಡು ವಂಚಿಸಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.