SOCIAL SERVICE: ಫುಡ್ ಆನ್ ವಾಲ್!! – ಫ್ರೀ ಕೂಪನ್, ಹೊಟ್ಟೆ ತುಂಬಾ ಊಟ!!

SOCIAL SERVICE: ಫುಡ್ ಆನ್ ವಾಲ್!! – ಫ್ರೀ ಕೂಪನ್, ಹೊಟ್ಟೆ ತುಂಬಾ ಊಟ!!

 


ಮಂಗಳೂರು: ಕೈಯಲ್ಲಿ ಕಾಸಿಲ್ಲದವರ ಹೊಟ್ಟೆ ತಣಿಸುತ್ತದೆ 'ಫುಡ್ ಆನ್ ವಾಲ್'. ರಾಜ್ಯದ 12 ಹೊಟೇಲ್ ಗಳಲ್ಲಿ ಕಾರ್ಯನಿರ್ವಹಿಸುತ್ತದೆ ಈ ತಂಡ. ಹೀಗಂದರೆ ಆಶ್ಚರ್ಯವಾಗದಿರದು. ಅದು ಹೇಗೆ ದುಡ್ಡಿಲ್ಲದಿದ್ದರೂ ಈ ಕಲಿಗಾಲದಲ್ಲಿ ಊಟ ಕೊಡ್ತಾರೆ ಎಂಬ ಅನುಮಾನ ಕಾಡದಿರದು.

ಆದರೆ ಮಂಗಳೂರಿನ ರೋಹನ್‌ ಶಿರಿಯಾ ನೇತೃತ್ವದ ಯೂನಿವರ್ಸಲ್‌ ನಾಲೆಡ್ಜ್‌ ಟ್ರಸ್ಟ್‌ ಈ ಪ್ರಯೋಗ ಮಾಡಿ ಯಶಸ್ವಿಯಾಗಿದೆ. ಮಂಗಳೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಭಾಗಗಳ 12 ಹೋಟೆಲ್‌ಗಳಲ್ಲಿ 'ಫುಡ್‌ ಆನ್‌ ವಾಲ್‌' ಪರಿಕಲ್ಪನೆ ಜಾರಿಗೊಂಡಿದೆ.

ಅಂಜಿಕೆ ಇಲ್ಲದೆ ಊಟ ಮಾಡಿ, ಹಣ ಇಲ್ಲವೆಂದು ಮರುಗದಿರಿ:

ಒಪ್ಪತ್ತಿನ ಊಟಕ್ಕೆ ಗತಿಯಿಲ್ಲದವರು ಹಸಿವಿನಿಂದ ಇರಬಾರದೆಂದು 'ಫುಡ್ ಆನ್ ವಾಲ್' ಪರಿಕಲ್ಪನೆಯಲ್ಲಿ ಬಡವರ ಹಸಿವು ತಣಿಸುವ ಕಾರ್ಯ ನಡೆಯುತ್ತಿದೆ‌. ಟೋಕನ್ ತೆಗೆದು ಕೌಂಟರ್ ನಲ್ಲಿ ನೀಡಿ ಯಾವುದೇ ಅಂಜಿಕೆಯಿಲ್ಲದೆ ಹೊಟ್ಟೆ ತುಂಬಾ ಊಟ ಮಾಡಬಹುದು ಎಂಬುದೇ ಇದರ ಕಾನ್ಸೆಪ್ಟ್.

ಸುಮಾರು ಒಂದು ವರ್ಷಗಳ ಹಿಂದೆ 'ಫುಡ್ ಆನ್ ವಾಲ್' ಪರಿಕಲ್ಪನೆ ಹುಟ್ಟಿಕೊಂಡಿತು. ಮಂಗಳೂರಿನ ಚಿಲಿಂಬಿಯ ಹೋಟೆಲ್ ಗಳಾದ ಇಲ್ಲದ ವಣಸ್, ಬಲ್ಮಠದ ಸಮಕ್ ಡೈನ್, ಕುದ್ರೋಳಿಯ ಕಿಂಗ್ಸ್ ಹೊಟೇಲ್ ಸೇರಿದಂತೆ, ಪುತ್ತೂರು, ಕಾರ್ಕಳ, ಬೆಳಗಾವಿ, ಧಾರವಾಡ, ಶಿವಮೊಗ್ಗ, ಬೆಂಗಳೂರು ಸೇರಿದಂತೆ 12 ಹೊಟೇಲ್ ಗಳಲ್ಲಿ 'ಫುಡ್ ಆನ್ ವಾಲ್' ವ್ಯವಸ್ಥೆ ಅಳವಡಿಸಲಾಗಿದೆ. ಎಲ್ಲಾ ಹೊಟೇಲ್ ಗಳಲ್ಲಿ ದಿನವೊಂದಕ್ಕೆ 15 ಕೂಪನ್ ನ ಊಟ ಹೋಗುತ್ತದೆ‌. ಪ್ರತೀ ಕೂಪನ್ ಗೆ 50 ರೂ. ಬೆಲೆಯ ಊಟ ನೀಡಲಾಗುತ್ತದೆ. ಈ ಕೂಪನ್ ಗಳ ನಿರ್ವಹಣೆಗೆ ಆ್ಯಪ್ ವ್ಯವಸ್ಥೆ ಇದ್ದು, ಬಂದ ಪ್ರತೀ ಕೂಪನ್ ಅನ್ನು ಹೊಟೇಲ್ ನವರು ಆ್ಯಪ್ ನಲ್ಲಿ ಅಪ್ಲೋಡ್ ಮಾಡುತ್ತಾರೆ.  ತಿಂಗಳಿಗೊಮ್ಮೆ ಹೊಟೇಲ್ ನವರಿಗೆ ಪೇಮೆಂಟ್ ಮಾಡಲಾಗುತ್ತದೆ‌. ಆ್ಯಪ್ ನಲ್ಲಿ ದಾನಿಗಳಿಗೂ ಹಣ ಸಹಾಯ ಮಾಡುವ ವ್ಯವಸ್ಥೆ ಇದೆ. ಕಳೆದ ಒಂದು ವರ್ಷದ ಅವಧಿಯಲ್ಲಿ 'ಫುಡ್ ಆನ್ ವಾಲ್'ನಿಂದ 12 ಸಾವಿರಕ್ಕೂ ಅಧಿಕ ಮಂದಿಯ ಹಸಿವು ತಣಿಸುವ ಕಾರ್ಯ ಆಗಿದೆ. ಒಟ್ಟಿನಲ್ಲಿ ಬಡವರು, ಕೈಯಲ್ಲಿ ಕಾಸಿಲ್ಲದ ಮಂದಿ ಒಂದು ಹೊತ್ತಿನ ಊಟವನ್ನು ಯಾವುದೇ ಮುಜುಗರವಿಲ್ಲದೆ ಇಲ್ಲಿ ಉಚಿತವಾಗಿ ಉಣ್ಣಬಹುದು. ಆದರೆ ಹಲವು ಮಂದಿ ಇದರ ದುರುಪಯೋಗಪಡಿಸಲೂಬಹುದು. ಅನಿವಾರ್ಯತೆ ಇದ್ದವರು ಮಾತ್ರ ಇದರ ಉಪಯೋಗ ಪಡೆದು ಪರಿಕಲ್ಪನೆಯ ಆಶಯಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕಿದೆ.

ಹೋಟೆಲ್‌ಗೆ ಬರುವ ಗ್ರಾಹಕರು 'ಫುಡ್‌ ಆನ್‌ ವಾಲ್‌'ಗೆ ಹೋಟೆಲ್‌ನಲ್ಲಿಯೇ ಹಣ ನೀಡಿ ನೋಂದಣಿ ಮಾಡಿಕೊಂಡು ತಮ್ಮ ಕೊಡುಗೆ ನೀಡಬಹುದು. ಸಂಸ್ಥೆಯ ಪರಿವರ್ತನ್‌ ಆ್ಯಪ್‌ ಮೂಲಕ ನೋಂದಣಿ ಮಾಡಿ ಕೂಡ ಹಸಿವು ತಣಿಸಲು ಸಹಕಾರ ನೀಡಬಹುದು ಎಂಬುದು ಇದರ ಪರಿಕಲ್ಪನೆ. ಹಣವೇ ಇಲ್ಲದೆ ಬಡವರ ಹೊಟ್ಟೆ ತಣಿಸುವ ಕಾರ್ಯ ಹೀಗೆ ಸದ್ದಿಲ್ಲದೆ ಏಳು ನಗರಗಳ 12 ಹೊಟೇಲ್ ಗಳಲ್ಲಿ ನಡೆಯುತ್ತಿದೆ. ಯುನಿವರ್ಸಲ್ ನಾಲೆಲ್ಡ್ ಟ್ರಸ್ಟ್ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದೆ. ಅದರ ವೆಬ್ ಸೈಟ್ ಹೀಗಿದೆ. https://universalknowledge.in/


Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ