-->
PILIKULA: ರೋವರ್ಸ್ ರೇಂಜರ್ಸ್ ವಿದ್ಯಾರ್ಥಿಗಳಿಗೆ ಎರಡು ದಿನಗಳ ಪುನಶ್ಚೇತನ ಶಿಬಿರ

PILIKULA: ರೋವರ್ಸ್ ರೇಂಜರ್ಸ್ ವಿದ್ಯಾರ್ಥಿಗಳಿಗೆ ಎರಡು ದಿನಗಳ ಪುನಶ್ಚೇತನ ಶಿಬಿರ

 

ಮಂಗಳೂರು: ಡಾ.ಪಿ.ದಯಾನಂದ ಪೈ-  ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಮಂಗಳೂರು ನ ರೋವರ್ಸ್ ರೇಂಜರ್ಸ್ ಘಟಕದ ವಿದ್ಯಾರ್ಥಿಗಳಿಗೆ ಎರಡು ದಿನಗಳ ಪುನಶ್ಚೇತನ ಶಿಬಿರ ಜಿಲ್ಲಾ ತರಬೇತಿ ಕೇಂದ್ರ ಪಿಲಿಕುಳದಲ್ಲಿ ನಡೆಯಿತು .

ಶಿಬಿರ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಜ್ಯ ಸಂಘಟನಾ ಕಾರ್ಯದರ್ಶಿ ಭರತ್ ರಾಜ್ ಕಾಲೇಜಿನಲ್ಲಿ ರೇಂಜರ್ಸ್ ರೋವರ್ಸ್ ಚಳುವಳಿಗೆ ಅಗತ್ಯ ಮತ್ತು ಆದ್ಯತೆಯನ್ನು ನೀಡಲು ಕರೆ ನೀಡಿದರು.'

ಪ್ರತಿಮ್ ಕುಮಾರ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಯುವಕರು ದುಶ್ಚಟಗಳಿಂದ  ದೂರ ಇರಬೇಕಾದರೆ ಸ್ಕೌಟ್ ಮತ್ತು  ಗೈಡ್ಸ್  ಚಳುವಳಿಗಳ ಅಗತ್ಯವಿದೆ ಎಂದು ಹೇಳಿದರು. ಶಿಬಿರದ ತರಬೇತುದಾರ ರಾದ ಶ್ರೀ ವಿನೋದ್ ಚೇವಾರ್ ಭಾಗವಹಿಸಿ ವಿದ್ಯಾರ್ಥಿಗಳು ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.

 ಕಾರ್ಯಕ್ರಮದಲ್ಲಿ, ಅತಿಥಿ ಗಳಾಗಿ ನಯನ ಜಯಕರ  ಭಂಡಾರಿ, ಕಾಲೇಜಿನ ಐಕ್ಯುಎಸಿ ಸಹಸಂಯೋಜಕರಾದ  ಡಾ. ಜ್ಯೋತಿ ಪ್ರಿಯ ಉಪಸ್ಥಿತರಿದ್ದು  ಶುಭ ಹಾರೈಸಿದರು.  ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಿನ್ಸಿಪಾಲ್ ಪ್ರೊ.ಜಯಕರ ಭಂಡಾರಿ  ಎಂ.ಅವರು  ಸ್ವಸ್ಥ ಸಮಾಜದ  ನಿರ್ಮಾಣಕ್ಕೆ  ವಿದ್ಯಾರ್ಥಿಗಳು ಶಿಸ್ತಿನ ಜೀವನ ವಿಧಾನ ನಡೆಸುವಂತೆ ಕರೆ ನೀಡಿದರು. ರೋವರ್ ಲೀಡರ್  ಡಾ. ಪುರುಷೋತ್ತಮ ಭಟ್ ಎನ್ ಮತ್ತು ರೇಂಜರ್ ಲೀಡರ್ ಡಾ. ಅಪರ್ಣ ಆಳ್ವ ಎನ್ ಉಪಸ್ಥಿತರಿದ್ದರು.

ರೇಂಜರ್. ಕಾವೇರಿ ಕಾರ್ಯಕ್ರಮ ನಿರೂಪಿಸಿದರು. ಗುರುಮೂರ್ತಿ ನಾಯಿಕಾಪು, ಪ್ರತಿಮ್ ಕುಮಾರ್, ವಿನೋದ್ ಚೇವಾರ್ ತರಬೇತಿ ನೀಡಿದರು ಎರಡು ದಿನಗಳ ಈ ಶಿಬಿರದಲ್ಲಿ ಸುಮಾರು 70 ಶಿಬಿರಾರ್ಥಿಗಳು ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.

 


Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ