CRAB MIGRATION: ಈ ಗ್ಯಾಂಗ್ ಹೊರಟರೆ, ಝೀರೋ ಟ್ರಾಫಿಕ್!!...ರಸ್ತೆಗಳೆಲ್ಲಾ ಫುಲ್ ಏಡಿಗಳೇ!!

CRAB MIGRATION: ಈ ಗ್ಯಾಂಗ್ ಹೊರಟರೆ, ಝೀರೋ ಟ್ರಾಫಿಕ್!!...ರಸ್ತೆಗಳೆಲ್ಲಾ ಫುಲ್ ಏಡಿಗಳೇ!!

 

ಚಿತ್ರಕೃಪೆ: ಅಂತರ್ಜಾಲ

ಈ ಗ್ಯಾಂಗ್ ಹೊರಟರೆ ರಸ್ತೆಗಳು ಝೀರೋ ಟ್ರಾಫಿಕ್ ಆಗುತ್ತವೆ. ಇವುಗಳನ್ನು ನೋಡಲು ಜನಜಾತ್ರೆ. ಇವುಗಳು ರೆಡ್ ಕ್ರ್ಯಾಬ್ ಅಥವಾ ಕ್ರಿಸ್‌ಮಸ್ ದ್ವೀಪದ ಕೆಂಪು ಏಡಿಗಳು. ಇವುಗಳು ಸಾಗೋ ಹಾದಿಯುದ್ದಕ್ಕೂ ರಸ್ತೆಗಿಳಿಯದಂತೆ ಪಕ್ಕದಲ್ಲೇ ಇವುಗಳಿಗಂತಾನೇ ಪ್ರತ್ಯೇಕ ಮಾರ್ಗ ಹಾಗೂ ಅದಕ್ಕೊಂದು ತಡೆಗೋಡೆಯನ್ನು ಅಲ್ಲಿನ ಸರಕಾರ ನಿರ್ಮಿಸಿಟ್ಟಿದೆ. ಇವುಗಳು ವಲಸೆಯ ದಿನಾಂಕವನ್ನು ಮೊದಲೇ ಘೋಷಣೆ ಮಾಡಿ, ಆ ಸಮಯದಲ್ಲಿ ರಸ್ತೆಗಳನ್ನೇ ಬಂದ್ ಮಾಡುತ್ತವೆ.
ಆಸ್ಟ್ರೇಲಿಯಾದ ಕ್ರಿಸ್‌ಮಸ್ ದ್ವೀಪದಲ್ಲಿ ಮಾತ್ರ ಇದು ನೋಡಲು ಸಿಗುತ್ತದೆ. ಕಾರಣ ಇಷ್ಟೇ. ಅರಣ್ಯಪ್ರದೇಶದಲ್ಲಿ ವಾಸಿಸುವ ಇವು ದೂರದ ಸಮುದ್ರದ ದಡಕ್ಕೆ ಸಂತಾನೋತ್ಪತ್ತಿಗಾಗಿ ಸಾಗುತ್ತವೆ. ಈ ಕೆಲಸಕ್ಕಾಗಿ ಒಂದೋ ಎರಡೋ ಅಲ್ಲ, ಅಷ್ಟೂ ಏಡಿಗಳು ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಒಂದೇ ಸಲಕ್ಕೆ ಸಮುದ್ರದತ್ತ ಗುಳೆ ಹೊರಟುಬಿಡ್ತವೆ. ಪ್ರತೀವರ್ಷ ಮೊದಲ ಮಳೆ ಬಿದ್ದ ತಕ್ಷಣ ಪ್ರಯಾಣ ಶುರು. ಸಮುದ್ರದ ದಡ ತಲುಪಿದ ನಂತರ ಗಂಡು ಏಡಿ ಸೂಕ್ತ ಜಾಗ ಹುಡುಕಿ ಗೂಡು ಮಾಡಿ ಕಾಯುತ್ತಾ ಕುಳಿತರೆ, ನಂತರ ಬರುವ ಹೆಣ್ಣು ಏಡಿಗಳು ತನಗಿಷ್ಟವಾದ ಮನೆ ಹೊಕ್ಕುತ್ತವೆ. ಮೂರನೇ ದಿನ ಗಂಡು ಏಡಿಗಳೆಲ್ಲಾ ಮರಳಿ ಕಾಡಿನತ್ತ ಹೊರಡು ಬಿಡುತ್ತವೆ. ಅಲ್ಲೇ ಉಳಿಯೋ ಹೆಣ್ಣು ಏಡಿಗಳು, ಮುಂದಿನ ಎರಡು ವಾರ ಠಿಕಾಣಿ ಹೂಡುತ್ತವೆ. ಲಕ್ಷ ಸಂಖ್ಯೆಯ ಮೊಟ್ಟೆಗಳೆಲ್ಲಾ ಲಾರ್ವಾ ರೂಪ ಪಡೆದ ನಂತರ ಅವುಗಳನ್ನು ಉಬ್ಬರದ ಅಲೆಗಳು ಬರುವ ಸಮಯ ನೋಡಿ ನೀರಿಗೆ ಬಿಟ್ಟು ತಾವೂ ಕಾಡಿನತ್ತ ನಡೆದು ಬಿಡುತ್ತವೆ. ಸಮುದ್ರ ಸೇರುವ ಲಾರ್ವಾ ಮರಿಗಳು ಮುಂದಿನ ಒಂದು ತಿಂಗಳಲ್ಲಿ ಹಲವಾರು ರೂಪ ಪಡೆದು ಕೊನೆಗೂ ಏಡಿಗಳಾಗಿ ತಯಾರಾಗುತ್ತವೆ. ಬಳಿಕ ಅವೂ ಡು ಸೇರುತ್ತವೆ.
Christmas Island's mass red crab migration is one of the most incredible natural processes on Earth. Every year, millions of these large crabs emerge from the forest and make their way to the ocean to breed, swarming across roads, streams, rocks and beaches. 

Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ