Uppinangady News: ಕಹಳೆ ನ್ಯೂಸ್ ಮುಖ್ಯಸ್ಥರ ಹೊಸಮೂಲೆ ಮನೆಗೆ ಶೃಂಗೇರಿ ಶ್ರೀ ಜಗದ್ಗುರುಗಳ ಭೇಟಿ - ಪಾದಪೂಜೆ
Monday, April 29, 2024
ಉಪ್ಪಿನಂಗಡಿ : ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದಲ್ಲಿರುವ ಕಹಳೆ ನ್ಯೂಸ್ ವಾಹಿನಿಯ ಮುಖ್ಯಸ್ಥರು ಹಾಗೂ ಪ್ರಧಾನ ಸಂಪಾದಕರಾದ ಶ್ಯಾಮ ಸುದರ್ಶನ ಭಟ್ ಅವರ ಹೊಸಮೂಲೆ ಮನೆಗೆ ಶ್ರೀ ದಕ್ಷಿಣಾಮ್ಮಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರರಾದ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರ ಕರಕಮಲಸಂಜಾತರಾದ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಭೇಟಿ ನೀಡಿ ಹರಸಿದರು.
ಪೂಜ್ಯ ಜಗದ್ಗುರುಗಳಿಗೆ ಮನೆಯ ಯಜಮಾನರಾದ ಗೋಪಾಲಕೃಷ್ಣ ಭಟ್ ದಂಪತಿಗಳು ಪಾದ ಪೂಜೆಯನ್ನು ನೆರವೇರಿಸಿದರು. ವೇ.ಮೂ. ಕೊಂಡಗೆ ಈಶ್ವರ ಭಟ್ ಅವರು ವೈದಿಕ ವಿಧಿಯನ್ನು ನೆರವೇರಿಸಿದರು. ಶೃಂಗೇರಿ ಮಠದ ಆಡಳಿತಾಧಿಕಾರಿಗಳಾದ ಮುರಳಿಯವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸುದರ್ಶನ್ ಮೂಡಬಿದಿರೆ, ಮಾಜಿ ಶಾಸಕರಾದ ಸಂಜೀವ ಮಠಂದೂರು, ಬಿಜೆಪಿ ಮುಖಂಡರಾದ ಪಿ.ಜಿ. ಜಗನ್ನಿವಾಸ್ ರಾವ್, ಉಪ್ಪಿನಂಗಡಿ ಸಿ.ಎ.ಬ್ಯಾಂಕ್ ಅಧ್ಯಕ್ಷರಾದ ಕೆ.ವಿ. ಪ್ರಸಾದ್, ಡಾ. ರವಿನಾರಾಯಣ್ ಸಿ., ಇಳಂತಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ತಿಮ್ಮಪ್ಪ ಗೌಡ ಇಳಂತಿಲ ಭಾಗಿಯಾಗಿದ್ದರು.