HASSAN CASE: ಹಾಸನ ಪ್ರಕರಣ: ಸಂತ್ರಸ್ತೆಯರಿಗೆ ದೂರು ನೀಡಲು ಹೆಲ್ಪ್ ಲೈನ್, ವಿವರ ಗೌಪ್ಯವಾಗಿಡಲಾಗುವುದು - ಎಸ್.ಐ.ಟಿ.

HASSAN CASE: ಹಾಸನ ಪ್ರಕರಣ: ಸಂತ್ರಸ್ತೆಯರಿಗೆ ದೂರು ನೀಡಲು ಹೆಲ್ಪ್ ಲೈನ್, ವಿವರ ಗೌಪ್ಯವಾಗಿಡಲಾಗುವುದು - ಎಸ್.ಐ.ಟಿ.



 ಹಾಸನ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯದ ಕುರಿತು ಈಗಾಗಲೇ ವಿಶೇಷ ತನಿಖಾ ರಚನೆಯಾಗಿ ತನಿಖೆಯೂ ಶುರುವಾಗಿದೆ. ತನಿಖಾ ಕಾಲದಲ್ಲಿ ಈ ಘಟನೆಗೆ ಸಂಬಂಧಿಸಿದಂತೆ ಕೆಲವು ಸಂತ್ರಸ್ತರು ದೂರು ನೀಡಿದ್ದಾರೆ. ಇನ್ನೂ ಹಲವಾರು ಸಂತ್ರಸ್ತರು ಇರುವುದು ಗೊತ್ತಾಗಿದೆ. ಯಾರೇ ಸಂತ್ರಸ್ತರು ಅಥವಾ ಬಾತ್ಮೀದಾರರಿಗೆ ಕಾನೂನಿನ ನೆರವು ಮತ್ತು ರಕ್ಷಣೆ ಬೇಕಿದ್ದರೆ ಕರೆ ಮಾಡಬಹುದು. ಇದಲ್ಲದೇ ಇನ್ನಿಲ್ಲದ ಯಾವುದೇ ಸಹಾಯ ಬೇಕಾದಲ್ಲಿ ಸಹಾಯವಾಣಿ ಸಂಖ್ಯೆ 6360938947 ಗೆ ಕರೆ ಮಾಡಬಹುದು ವಿಶೇಷ ತನಿಖಾ ತಂಡದ ಮುಖ್ಯಸ್ಥರಾದ ಬಿ.ಕೆ.ಸಿಂಗ್‌ ತಿಳಿಸಿದ್ದಾರೆ.

ಈ ಸಹಾಯವಾಣಿಗೆ ಕರೆ ಮಾಡುವವರು, ಮಾಹಿತಿ ನೀಡುವವರು ಅಥವಾ ಬಾತ್ಮೀದಾರರ ವಿವರಗಳನ್ನು ಕರ್ನಾಟಕ ಪೊಲೀಸ್‌ ಇಲಾಖೆಯ ವಿಶೇಷ ತಂಡವು ಸಂಪೂರ್ಣವಾಗಿ ಗುಪ್ತವಾಗಿ ಇಡಲಿದೆ. ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ