LOK SABHA EXIT POLL 2024: ಎಲ್ಲ ಸಮೀಕ್ಷೆಗಳ ಪ್ರಕಾರ ಬಿಜೆಪಿ ನೇತೃತ್ವದ ಎನ್.ಡಿ.ಎ.ಗೆ ಅಧಿಕಾರ

LOK SABHA EXIT POLL 2024: ಎಲ್ಲ ಸಮೀಕ್ಷೆಗಳ ಪ್ರಕಾರ ಬಿಜೆಪಿ ನೇತೃತ್ವದ ಎನ್.ಡಿ.ಎ.ಗೆ ಅಧಿಕಾರ

 

LOK SABHA EXIT POLL 2024: ಎಲ್ಲ ಸಮೀಕ್ಷೆಗಳ ಪ್ರಕಾರ ಬಿಜೆಪಿ ನೇತೃತ್ವದ ಎನ್.ಡಿ.ಎ.ಗೆ ಅಧಿಕಾರ

ಲೋಕಸಭೆ ಚುನಾವಣೆಯ ಕೊನೆಯ ಹಂತದ ಮತದಾನ ಮುಕ್ತಾಯವಾದ ಬಳಿಕ ಮತಗಟ್ಟೆ ಸಮೀಕ್ಷೆಗಳು (EXIT POLL 2024) ಪ್ರಕಟಗೊಳ್ಳುತ್ತಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟಕ್ಕೆ ಬಹುಮತದ ಮುನ್ಸೂಚನೆಯನ್ನು ನೀಡಿದೆ. ಇದು ಸಹಜವಾಗಿಯೇ ಬಿಜೆಪಿ ಪಾಳಯದಲ್ಲಿ ಸಂತಸ ಮೂಡಿಸಿವೆ. 

543 ಸದಸ್ಯ ಬಲದ ಲೋಕಸಭೆಗೆ 272 ಸ್ಥಾನ ಹಾಗೂ ಅದಕ್ಕಿಂತಲೂ ಹೆಚ್ಚು ಸೀಟು ಗಳಿಸಿದರೆ, ಬಹುಮತ ಖಚಿತ. ನರೇಂದ್ರ ಮೋದಿ ಅವರ ಅಧಿಕಾರ 3ನೇ ಅವಧಿಗೆ ಮುಂದುವರಿಯಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ.

REPUBLIC TV 359, INDIA NEWS 371, MATRIZE 353, ZEE NEWS 353, JANKI BAT 362, LOKPOLL 325 ಸ್ಥಾನಗಳನ್ನು ಎನ್.ಡಿ.ಎ. ಗಳಿಸಲಿದೆ ಎಂದಿದೆ. ಹಾಗೆ ನೋಡಿದರೆ, ಕಾಂಗ್ರೆಸ್ ನೇತೃತ್ವದ INDIA ಒಕ್ಕೂಟಕ್ಕೂ ಸೀಟುಗಳು ಜಾಸ್ತಿ ಆಗಲಿವೆ. ಇದುವರೆಗೆ ಬಂದ ಎಲ್ಲ ಸಮೀಕ್ಷೆಗಳಲ್ಲೂ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮುಂದಾಳತ್ವದ ಎನ್.ಡಿ.ಎ. ಅಧಿಕಾರ ಗಳಿಸಲಿದೆಯಾದರೂ 400 ಗಡಿ ದಾಟುವುದಾಗಿ ಯಾವ ಸಮೀಕ್ಷೆಯೂ ಹೇಳುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ಗೆ ಅದೊಂದು ಸಮಾಧಾನ ಎಂದು ವಿಶ್ಲೇಷಕರು ಬಣ್ಣಿಸುತ್ತಿದ್ದಾರೆ.

Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ