CRIME: ಧಾರವಾಡದಲ್ಲಿ ವಾಸವಾಗಿದ್ದ ನೈಜೀರಿಯನ್ ಪ್ರಜೆ ಬಂಧನ, ಬೃಹತ್ ಪ್ರಮಾಣದ ಕೋಕೇನ್ ಮಾರಾಟ ಜಾಲ ಪತ್ತೆ
Saturday, September 14, 2024
ಧಾರವಾಡ: ಮಾದಕ ವಸ್ತು ಮಾರಾಟ ಜಾಲ ಹಿನ್ನೆಲೆ ಧಾರವಾಡದಲ್ಲಿ ವಾಸವಾಗಿದ್ದ ನೈಜಿರಿಯಾ ಪ್ರಜೆಯನ್ನು ಬಂಧಿಸಲಾಗಿದೆ.
ನಾರ್ಕೋಟಿಕ್ ಕಂಟ್ರೋಲ್ ಬ್ಯುರೋದಿಂದ ಬಂಧನ ನಡೆದಿದೆ. ಕೇಂದ್ರ ಗೃಹ ಇಲಾಖೆ ಅಧೀನದ ನಾರ್ಕೋಟಿಕ್ ಕಂಟ್ರೊಲ್ ಬ್ಯುರೋದ ಬೆಂಗಳೂರು ಬ್ಯುರೋದ ಅಧಿಕಾರಿಗಳಿಂದ ಬಂಧನ ನಡೆದಿದೆಮ
ಧಾರವಾಡ ಮಾಳಮಡ್ಡಿ 3ನೇ ಕ್ರಾಸ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ನೈಜಿರಿಯಾ ಪ್ರಜೆ ಬಾಡಿಗೆ ಮನೆಯಲ್ಲಿದ್ದುಕೊಂಡೇ ಕೊಕೆನ್ ಮಾರಾಟ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.
ದೇಶದ ವಿವಿಧೆಡೆ ಕೊಕೆನ್ ಮಾರಾಟ ಜಾಲ ಹೊಂದಿದ್ದ ವ್ಯಕ್ತಿ
ರೈಲ್ವೆ ನಿಲ್ದಾಣ ಬಳಿಯಲ್ಲಿಯೇ ಬಾಡಿಗೆ ಮನೆ ಮಾಡಿದ್ದ. ಮನೆಯಲ್ಲಿ ಅಪಾರ ಪ್ರಮಾಣದ ಲೇಡಿಜ್ ವ್ಯಾನಿಟಿ ಬ್ಯಾಗ್, ಪರ್ಸ್ ಗಳು ಪತ್ತೆಯಾಗಿವೆ. ಪರ್ಸ್ ಮಾರಾಟದ ನೆಪದಲ್ಲಿ ಕೊಕೆನ್ ಸಾಗಿಸುತ್ತಿದ್ದ ಶಂಕೆ ಇದೆ. ತೂಕದ ಯಂತ್ರ, ಪ್ಯಾಕಿಂಗ್ ಯಂತ್ರಗಳು ಸಹ ಪತ್ತೆಯಾಗಿದೆ. ಬಾಡಿಗೆ ಮನೆಯಲ್ಲಿಯೇ ಕೊಕೆನ್ ಪ್ಯಾಕ್ ಮಾಡಿ, ಪರ್ಸ್ ಗಳಲ್ಲಿ ಹಾಕಿ ಸಾಗಿಸುತ್ತಿದ್ದ ಶಂಕೆ ವ್ಯಕ್ತವಾಗಿದೆ.
ಕಳೆದ ಐದಾರು ವರ್ಷಗಳಿಂದ ಧಾರವಾಡದಲ್ಲಿ ವಾಸವಾಗಿದ್ದ ವ್ಯಕ್ತಿ ಹಲವಾರು ವರ್ಷಗಳಿಂದ ವಾಸವಾಗಿದ್ದರೂ ಕೊಕೆನ್ ಸಾಗಾಟ ಗೌಪ್ಯವಾಗಿ ನಡೆಯುತ್ತಿತ್ತು.
ಮಾರ್ಟಿನ್, ಮ್ಯಾಥೂ, ಟೀಮ್ ಎಂದು ವಿವಿಧ ಹೆಸರುಗಳಲ್ಲಿ ಗುರುತಿಸಿಕೊಂಡಿದ್ದ ವ್ಯಕ್ತಿ ಉನ್ನತ ವ್ಯಾಸಂಗ ಮಾಡೊಕೆ ಬಂದಿರೋದಾಗಿ ಹೇಳಿಕೊಂಡು ಬಾಡಿಗೆ ಮನೆ ಪಡೆದು ವಾಸವಾಗಿದ್ದ.
ಬೇರೆ ಬೇರೆ ರಾಜ್ಯಗಳಲ್ಲಿ ಕೊಕೆನ್ ಮಾರಾಟ ಜಾಲದ ತನಿಖೆ ನಡೆಯುತ್ತಿದ್ದು, ಈ ವೇಳೆ ನೈಜಿರಿಯಾ ಪ್ರಜೆಯ ಪಾತ್ರ ಪತ್ತೆಯಾಗಿದೆ. ಬೇರೆ ಕಡೆ ಆತನನ್ನು ಬಂಧಿಸಿ ಕರೆತಂದಿರೋ ನಾರ್ಕೋಟಿಕ್ ಕಂಟ್ರೋಲ್ ಬ್ಯುರೋ ಅಧಿಕಾರಿಗಳ 8 ಮಂದಿಯ ತಂಡದಿಂದ ಪರಿಶೀಲನೆ ನಡೆಸಲಾಗಿದೆ