UDUPI NEWS: ಸಮಾಜಸೇವಕಿ ಕಿರಣ ಅಕ್ಕ ನಿಧನ
Monday, November 18, 2024
ಉಡುಪಿ: ಉಡುಪಿಯ ಸಮಾಜಸೇವಕಿ ಕಿರಣ ಅಕ್ಕ ಎಂದೇ ಜನಪ್ರಿಯರಾಗಿದ್ದ ಸುಜಾತಾ ಸುಧಾಕರ ಕಾಮತ್ (76) ನ.16ರಂದು ಮಧ್ಯಾಹ್ನ ಉಡುಪಿ ಟಿಎಂಎ ಪೈ ಆಸ್ಪತ್ರೆಯಲ್ಲಿ ನಿಧನರಾದರು.
ಮರಣಾನಂತರ ದೇಹದಾನ ಮಾಡಬೇಕು ಎಂದು ಅವರು ಬಯಸಿದ್ದ ಹಿನ್ನೆಲೆಯಲ್ಲಿ ದೇಹದಾನ ಮಾಡಲಾಯಿತು.
ಅವರು ನಾಲ್ವರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
. ಕಾಮತ್ ಅವರು ವಿವಿಧ ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಆರ್‌ಎಸ್‌ಎಸ್ ಮಹಿಳಾ ಮೋರ್ಚಾ ಮತ್ತು ಬಿಜೆಪಿ ಮಹಿಳಾ ಮೋರ್ಚಾ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದಾರೆ. ಶ್ರೀ ಕೃಷ್ಣ ಬಾಲನಿಕೇತನ ಮತ್ತು ಕಾತ್ಯಾಯನಿ ಶಿಶು ಮಂದಿರದ ಮಾಜಿ ಟ್ರಸ್ಟಿ ಮತ್ತು ಉಡುಪಿಯ ಸರ್ಕಾರಿ ಬಾಲಕಿಯರ ಕಾಲೇಜಿನ ಮಾಜಿ ಖಜಾಂಚಿಯೂ ಆಗಿದ್ದರು.
ಉಡುಪಿಯಲ್ಲಿ ಆರ್ಯಸಮಾಜದ ಹಿರಿಯ ಪ್ರತಿನಿಧಿಯಾಗಿದ್ದ ಅವರು ತಮ್ಮ ಜೀವನದುದ್ದಕ್ಕೂ ಅದರ ತತ್ವಗಳ ದೃಢ ಅನುಯಾಯಿಯಾಗಿ ಬಾಳಿದರು.