
BABY MEMORIAL HOSPITAL: ಕೋಝಿಕ್ಕೋಡ್ ಬೇಬಿ ಮೆಮೋರಿಯಲ್ ಆಸ್ಪತ್ರೆಯಲ್ಲಿ ಅಡ್ವಾನ್ಡ್ ರೋಬೋಟಿಕ್ ಲೇಸರ್ ಯುರೋಲಜಿ ಸೆಂಟರ್ - Details
ಕೋಝಿಕ್ಕೋಡ್ ನ ಬೇಬಿ ಮೆಮೋರಿಯಲ್ ಆಸ್ಪತ್ರೆಯಲ್ಲಿ ನೂತನ ರೋಬೊಟಿಕ್ಸ್ ಮತ್ತು ಲೇಸರ್ ಯುರೋಲಜಿ ಕೇಂದ್ರ ಆರಂಭಗೊಂಡಿದೆ.

ಈ ಸಂದರ್ಭ ಮಾತನಾಡಿದ ಡಾ. ಅನಂತ ಮೋಹನ ಪೈ, ಬೇಬಿ ಮೆಮೋರಿಯಲ್ ಆಸ್ಪತ್ರೆ ಪ್ರಮುಖ ಮೈಲುಗಲ್ಲನ್ನು ಸಾಧಿಸಿದ್ದು, ಬಲ ಮೂತ್ರಜನಕಾಂಗದ ಗ್ರಂಥಿಯನ್ನು ಆವರಿಸಿರುವ 19x5 ಸೆಂ.ಮೀ. ಅಳತೆ ಮತ್ತು 1.26 ಕೆ.ಜಿ. ತೂಕದ ರೆಟ್ರೊಪೆರಿಟೋನಿಯಲ್ ಗೆಡ್ಡೆಯನ್ನು ರೋಬೊಟಿಕ್ ಸರ್ಜರಿ ಮೂಲಕ ತೆಗೆಯಲಾಗಿದೆ ಎಂದು ಪ್ರಕಟಿಸಿದರು.
ಹಿರಿಯ ಸಲಹೆಗಾರ, ಯುರೋಲಾಜಿಸ್ಟ್ ಡಾ. ಕೃಷ್ಣಮೋಹನ ಆರ್, ಡಾ. ಹರಿಗೋವಿಂದ್ ಪಿ, ಡಾ. ಪಂಕಜ್ ಬಿರು, ರೋಬೊಟಿಕ್ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಡಾ. ರಾಜೇಶ್, ಡಾ. ದೀಪಾ ಅರಿವಳಿಕೆಯಲ್ಲಿ ಸಹಕರಿಸಿದರು. ನಾಲ್ಕು ಗಂಟೆಗಳ ಶಸ್ತ್ರಚಿಕಿತ್ಸೆಯಲ್ಲಿ ಯಾವುದೇ ರಕ್ತದ ನಷ್ಟವಿಲ್ಲದೆ ಚಿಕಿತ್ಸೆ ನಡೆಸಲಾಗಿದೆ ಎಂದು ಡಾ.ಕೃಷ್ಣಮೋಹನ್ ತಿಳಿಸಿದ್ದಾರೆ.
ರೋಬೋಟಿಕ್ ಸರ್ಜರಿ ಎಂದರೇನು (WHAT IS ROBOTIC SURGERY)
ರೋಬೋಟಿಕ್ ಸರ್ಜರಿ ಹೆಸರೇ ಹೇಳುವಂತೆ ಅತ್ಯಾಧುನಿಕ ವ್ಯವಸ್ಥೆಯನ್ನು ಒಳಗೊಂಡಿರುವ ಶಸ್ತ್ರಚಿಕಿತ್ಸೆ. ಇಲ್ಲಿ ಕಂಪ್ಯೂಟರ್ ಕೇಂದ್ರಿತ ವ್ಯವಸ್ಥೆ ಇದ್ದು, ಸರ್ಜನ್ ಗಳು ಅತ್ಯಂತ ಕ್ಲಿಷ್ಟ ಮತ್ತು ಸೂಕ್ಷ್ಮವಾದ ಶಸ್ತ್ರಚಿಕಿತ್ಸೆಗಳನ್ನು ಸುಲಭವಾಗಿ ಮಾಡಲು ಸಾಧ್ಯವಾಗುತ್ತದೆ. ಡಾವಿನ್ಸಿ ಸಿಸ್ಟಮ್ ಅತ್ಯಂತ ಪರಿಣಾಮಕಾರಿಯಾಗಿ ಇದನ್ನು ಅಳವಡಿಸಿದೆ. ಇದು ವಿಶ್ವಮಾನ್ಯವಾದ ಸರ್ಜರಿ ವ್ಯವಸ್ಥೆ. ಅಮೆರಿಕಾದಲ್ಲಿ ಶೇ.85ರಷ್ಟು ಯುರಾಲಜಿಗೆ ಸಂಬಂಧಿಸಿದ ಸರ್ಜರಿಗಳು ರೋಬೊಟಿಕ್ ವ್ಯವಸ್ಥೆ ಮೂಲಕ ನಡೆಯುತ್ತಿದ್ದು, ಇದೀಗ ಬೇಬಿ ಮೆಮೋರಿಯಲ್ ಆಸ್ಪತ್ರೆಗೂ ಇದು ದೊರಕಿದೆ.
Major urinary disorders treated through robotic surgery by da Vinci.
ಡಾ ವಿನ್ಸಿ ರೋಬೊಟಿಕ್ ಸರ್ಜರಿ ಮೂಲಕ ನಡೆಯುವ ಮುಖ್ಯ ಸಮಸ್ಯೆಗಳ ಶಸ್ತ್ರಚಿಕಿತ್ಸಗಳು ಇವು.
ಪ್ರೋಸ್ಟೇಟ್ ಕ್ಯಾನ್ಸರ್ ( PROSTATE CANCER)
ರೋಬಿಟಿಕ್ ಅಸಿಸ್ಟೆಡ್ ರಾಡಿಕಲ್ ಪ್ರೊಸ್ಟೆಕ್ಟೊಮಿ (RARP) ಯಿಂದ ಶಸ್ತ್ರಚಿಕಿತ್ಸೆ ನಡೆಯುತ್ತದೆ. (ಲಾಭಗಳು: ನರಮಂಡಲವನ್ನು ಒಳಗೊಂಡ ಭಾಗ, ಅಂಗಗಳ ಶಕ್ತಿ ಮತ್ತು ಸಾಮರ್ಥ್ಯದ ರಕ್ಷಣೆ ಇದರಿಂದ ಸಾಧ್ಯ )
ಮೂತ್ರಪಿಂಡದ ಕ್ಯಾನ್ಸರ್ (KIDNEY CANCER)
ರೋಬೊಟಿಕ್ಸ್ ನಿಂದ ಭಾಗಶಃ ಆಥವಾ ಸಮಗ್ರ ಶಸ್ತ್ರಚಿಕಿತ್ಸೆ ಇದರಿಂದ ಸಾಧ್ಯ. ಅಂಗಸಂರಕ್ಷಣೆ, ರಕ್ತ ಕಡಿಮೆ ನಷ್ಟ, ವೇಗದ ಚೇತರಿಕೆ ಇದರಿಂದ ಪ್ರಯೋಜನ.
ಮೂತ್ರಕೋಶದ ಕ್ಯಾನ್ಸರ್ (BLADDER CANCER)
ರೋಬೊಟಿಕ್ ಚಿಕಿತ್ಸೆ ಮೂಲಕ ಕಡಿಮೆ ಸಂಕೀರ್ಣತೆಯ ಚಿಕಿತ್ಸೆ ಇದರಿಂದ ಸಾಧ್ಯ. ಫಲಿತಾಂಶವೂ ನಿಖರ. ರೊಬೊಟಿಕ್ ರಾಡಿಕಲ್ ಸಿಸ್ಟೆಕ್ಟೊಮಿ ಮೂಲಕ ಚಿಕಿತ್ಸೆ.
ಮೂತ್ರನಾಳದ ಪೆಲ್ವಿಕ್ ಜಂಕ್ಷನ್ ಅಡಚಣೆ (Obstruction of the uroteropelvic junction)
ರೊಬೋಟಿಕ್ ಪೈಲೋಪ್ಲಾಸ್ಟಿ (ಪ್ರಯೋಜನಗಳು: ಉನ್ನತ ಯಶಸ್ಸಿನ ಪ್ರಮಾಣ, ಕಡಿಮೆ ದಾಖಲೆಗಳು)
ಯೂರಿಟೆರೈಡ್ ರಚನೆಗಳು ( Euripterid structures )
ರೋಬೊಟಿಕ್ ವಿಧಾನದ ಮೂಲಕ ಮೂತ್ರನಾಳದ ಅಳವಡಿಕೆ (ರೀಪ್ಲಾಂಟೇಶನ್) ಸಾಧ್ಯವಾಗುತ್ತದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ಇದರಿಂದ ಅಂಗಾಂಶದ ನಿಖರತೆಯ ವಿಧಾನವನ್ನು ಸುಧಾರಿತ ನಿರ್ವಹಣೆ ಸಾಧ್ಯವಾಗುತ್ತದೆ.
ಮೂತ್ರಜನಕಾಂಗದ ಗೆಡ್ಡೆಗಳು (Adrenal tumors)
ರೊಬೊಟಿಕ್ ಅಡ್ರಿನಾಲೆಕ್ಟಮಿ ಮೂಲಕ ಇದರ ನಿವಾರಣೆ ಸಾಧ್ಯವಾಗುತ್ತದೆ. ದೊಡ್ಡ ಮಟ್ಟಿನ ಹಳೆಯ ವಿಧಾನಗಳನ್ನೆಲ್ಲ ನಿವಾರಿಸಿ ಕಡಿಮೆ ಸಮಯ ಹಾಗೂ ಕನಿಷ್ಠ ಶಸ್ತ್ರಪ್ರವೇಶದ ಮೂಲಕ ಕೆಲಸ ಸಾಧ್ಯವಾಗುತ್ತದೆ.
ಮಹಿಳೆಯರ ಪೆಲ್ವಿಕ್ ಅಂಗಾಂಶ ಸಮಸ್ಯೆ Pelvic organ prolapse (in women)
ರೊಬೊಟಿಕ್ ಸ್ಯಾಕ್ರೊಕೊಲ್ಪೊಪೆಕ್ಸ್ ಮೂಲಕ ಅಂಗಹಿಗ್ಗುವಿಕೆಯ ಸಮಸ್ಯೆಯನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ವೇಗದ ಚೇತರಿಕೆಯೂ ಇದರಿಂದ ಸಾಧ್ಯವಾಗುತ್ತದೆ.
ಪೀಡಿಯಾಟ್ರಿಕ್ ಯುರಾಲಜಿ Pediatric Urology
ರೋಬೋಟಿಕ್ ಸಹಾಯದಿಂದ ಪೈಲೋಪ್ಲಾಸ್ಟಿ, ಯೂರಿಟೆರಿಕ್ ಮರುನಿಯೋಜನೆ ಸಾಧ್ಯ ಇದರಿಂದ ನೋವು ಕಡಿಮೆಯಾಗುತ್ತದೆ.
ಬೇಬಿ ಮೆಮೋರಿಯಲ್ ಆಸ್ಪತ್ರೆ 1987ರಲ್ಲಿ ಸ್ಥಾಪನೆಯಾಗಿ 500ಕ್ಕೂ ಅಧಿಕ ಬೆಡ್ ಗಳು ಸುಧಾರಿತ ಉಪಕ್ರಮಗಳು, 40ಕ್ಕೂ ಅಧಿಕ ವೈದ್ಯಕೀಯ ನೆರವುಗಳು, ಅತ್ಯಾಧುನಿಕ ಸೌಲಭ್ಯ, ಹೃದ್ರೋಗದಿಂದ ತೊಡಗಿ ನೆಫ್ರಾಲಜಿವರೆಗೆ, ಆಂಕೋಲಜಿ ಸಹಿತ ರೋಬಿಟೊಕ್ ಸರ್ಜರಿ ಸೇರಿದಂತೆ ಹಲವು ಪ್ರಮುಖ ವ್ಯವಸ್ಥೆಗಳನ್ನು ಒಳಗೊಂಡಿದೆ. ಡಾ. ಕೆ.ಜಿ. ಅಲೆಕ್ಸಾಂಡರ್ ಸ್ಥಾಪಿಸಿದ ಈ ಆಸ್ಪತ್ರೆ ಕೇರಳದಲ್ಲಿ ನಂಬರ್ ಒನ್ ಆರೋಗ್ಯ ಸೇವೆ ನೀಡುತ್ತಿದೆ. ಕಣ್ಣೂರು, ಕೋಯಿಕ್ಕೋಡ್, ತೋಡುಪುಳ, ಪಯ್ಯನ್ನೂರಿನಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ, ಪೆರುಂಬವೂರ್, ವಡಕಾರದಲ್ಲಿ ಹೊಸ ಕೇಂದ್ರಗಳೊಂದಿಗೆ ಸುಸಜ್ಜಿತ ಚಿಕಿತ್ಸೆ ನೀಡುತ್ತಿದೆ. 50ಕ್ಕು ಅಧಿಕ ವಿಶೇಷತೆಗಳನ್ನು ಹೊಂದಿರುವ ಈ ಆಸ್ಪತ್ರೆ ತನ್ನ ಬದ್ಧತೆಯಿಂದ ಗಮನ ಸೆಳೆದಿದೆ.
BMH ನಲ್ಲಿರುವ ರೋಬೋಟಿಕ್ ಸರ್ಜರಿ ಕುರಿತು:
BMH ರೋಬೊಟಿಕ್ ಶಸ್ತ್ರಚಿಕಿತ್ಸೆ ವಿಶ್ವದಲ್ಲೇ ಜನಪ್ರಿಯವಾಗಿರುವ ಡಾವಿಂಚಿಇ ಶಸ್ತ್ರಚಿಕಿತ್ಸಾ ವ್ಯವಸ್ಥೆಯನ್ನು ಬಳಸಿ, ನಿಖರತೆಗೆ ಹೆಸರುವಾಸಿಯಾದ ವಿಧಾನವನ್ನು ಬಳಸಿಕೊಳ್ಳುತ್ತಿರುವುದು ಗಮನಾರ್ಹ ವಿಚಾರ. ನುರಿತ ಸಿಬ್ಬಂದಿ, ಸೂಕ್ತ ತರಬೇತಿಯನ್ನು ಪಡೆದುಕೊಂಡು ಈ ಚಿಕಿತ್ಸಾ ವಿಧಾನವನ್ನು ಮಾಡುತ್ತಾರೆ. ಯುರಾಲಜಿ ಸಹಿತ ನಾನಾ ಕ್ಷೇತ್ರಗಳಲ್ಲೂ ರೋಬೊಟಿಕ್ ತಂತ್ರಜ್ಞಾನ ಬಳಸಿ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಾಗಿದೆ. ವಿಶ್ವದರ್ಜೆ, ವೇಗ ಹಾಗೂ ಸುರಕ್ಷಿತ ಶಸ್ತ್ರಚಿಕಿತ್ಸೆ ಇದೀಗ ಬಿಎಂಎಚ್ ಆಸ್ಪತ್ರೆಯಲ್ಲಿ ಲಭ್ಯ ಎಂದು ಪ್ರಕಟಣೆ ತಿಳಿಸಿದೆ.