-->
MANGALORE: ಮಂಗಳೂರಿನ ದೇರೆಬೈಲ್ ಶಾಲೆಯಲ್ಲಿ TALESSEEMIA, SICKLE CELL ದಿವ್ಯಾಂಗರಿಗಾಗಿ ಸ್ವಪ್ರೇರಿತ ರಕ್ತದಾನ ಶಿಬಿರ

MANGALORE: ಮಂಗಳೂರಿನ ದೇರೆಬೈಲ್ ಶಾಲೆಯಲ್ಲಿ TALESSEEMIA, SICKLE CELL ದಿವ್ಯಾಂಗರಿಗಾಗಿ ಸ್ವಪ್ರೇರಿತ ರಕ್ತದಾನ ಶಿಬಿರ

 

MANGALORE: ಮಂಗಳೂರಿನ ದೇರೆಬೈಲ್ ಶಾಲೆಯಲ್ಲಿ TALESSEEMIA, SICKLE CELL ದಿವ್ಯಾಂಗರಿಗಾಗಿ ಸ್ವಪ್ರೇರಿತ ರಕ್ತದಾನ ಶಿಬಿರ ನಡೆಯಿತು.

ದೇರೆಬೈಲು ಕೊಂಚಾಡಿಯ ವಿದ್ಯಾ ಹಿರಿಯ ಪ್ರಾಥಮಿಕ ಶಾಲೆ ವಠಾರದಲ್ಲಿ ನಡೆದ ಈ ಕಾರ್ಯಕ್ರಮವನ್ನು ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕ  ಜೈ ತುಲುನಾಡ್ (ರಿ) ಮಂಗಳೂರು ಘಟಕ ಮತ್ತು ಸೇವಾ ಭಾರತಿ (ರಿ) ಮಂಗಳೂರು, ವೆನ್ಲಾಕ್ ಆಸ್ಪತ್ರೆ ಸಹಯೋಗದೊಂದಿಗೆ ಆಯೋಜಿಸಿತು.

TALASSEMIA ಮತ್ತು SICKLE CELL ಎರಡು ರೀತಿಯ ರಕ್ತಕ್ಕೆ ಸಂಬಂಧ ಪಟ್ಟ ದಿವ್ಯಾಂಗತೆ. ಈ ದಿವ್ಯಾಂಗತೆ ಇರುವವರಿಗೆ ನಿರಂತರ ರಕ್ತದ ಅವಶ್ಯಕತೆ ಇರುತ್ತದೆ. ಅಲ್ಲದೆ ಬೇರೆ ಬೇರೆ ತುರ್ತು ಸಂದರ್ಭಗಳಿಗೆ ರಕ್ತ ಬೇಕಾಗುವುದು ಎಲ್ಲರಿಗೂ ತಿಳಿದ ವಿಷಯ. ಈ ಮೇಲಿನ ಅಗತ್ಯತೆಯನ್ನು ಮನಗಂಡು ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕ,ಜೈ ತುಲುನಾಡ್ (ರಿ.) ಮಂಗಳೂರು ಘಟಕ ಮತ್ತು ಸೇವಾ ಭಾರತಿ(ರಿ) ಮಂಗಳೂರು, ವೆನ್ಲಾಕ್ ಆಸ್ಪತ್ರೆಯ ಸಹಯೋಗದೊಂದಿಗೆ ಕಾರ್ಯಕ್ರಮವನ್ನು ನಡೆಸಿದ್ದು,  ಸುಮಾರು 70 ಕ್ಕಿಂತ ಅಧಿಕ ಸಂಖ್ಯೆಯಲ್ಲಿ ದೇಶಪ್ರೇಮಿ ಸಮಾಜ ಬಾಂದವರು ಸ್ವಯಂಪ್ರೇರಿತರಾಗಿ ನೋಂದಣಿ ಮಾಡಿಸಿ ಕಾರ್ಯಕ್ರಮ ಯಶಸ್ವಿಯನ್ನಾಗಿಸಿದರು. ಸೇವಭಾರತಿ ಮಂಗಳೂರು(ರಿ) ವಿಶ್ವಸ್ಥರಾದ ಸಮಾಜ ಸೇವಕರಾದ ವಿನೋದ್ ಶೆಣೈ, ಸಕ್ಷಮದ ಜಿಲ್ಲಾಧ್ಯಕ್ಷ ರಾಜಶೇಖರ ಭಟ್ ಕಾಕುಂಜೆ, ಜಿಲ್ಲಾ ಕಾರ್ಯದರ್ಶಿಗಳಾದ ಹರೀಶ್ ಪ್ರಭು, ಜೈ ತುಳುನಾಡು ಸಂಘದ ಅಧ್ಯಕ್ಷರಾದ ಮನೀಶ್, ಆಶಾ ಜ್ಯೋತಿ ಮಂಗಳೂರು ಅಧ್ಯಕ್ಷೆ ಗೀತಾ ಲಕ್ಷ್ಮೀಶ, ವೆನ್ಲಾಕ್ ಆಸ್ಪತ್ರೆಯ ರಕ್ತ ಬ್ಯಾಂಕಿನ ಮುಖ್ಯಸ್ಥರಾದ ಅಶೋಕ್ ಮತ್ತು ಸುಪ್ರೀಮ್ ಮೋಟಾರ್ ಜನರಲ್ ಮ್ಯಾನೇಜರ್ ಗುರುಪ್ರಸಾದ್ ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು. ಮೊದಲಿಗನಾಗಿ ರಕ್ತದಾನ ಮಾಡಿದ ವಿಷ್ಣುವರ್ಧನ್ ಯುವಕ ಸಂಘದ ಅಕ್ಬರ್ ಕೊಂಚಾಡಿ ಎಲ್ಲಾ ಆರೋಗ್ಯವಂತ ಸಮಾಜ ಬಾಂದವರು ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಿ ಜೀವ ರಕ್ಷಕರಾಗಬೇಕು ಎಂದು ಶುಭ ನುಡಿದರು.

ಜೈ ತುಳುನಾಡು(ರಿ) ಸಂಘಟನೆಯ ಕೇಂದ್ರ ಸಮಿತಿ ಅಧ್ಯಕ್ಷ ಉದಯ್ ಪೂಂಜಾ ತಾರಿಪಾಡಿಗುತ್ತು ಶುಭ ಹಾರೈಸಿದರು. ವೆನ್ಲಾಕ್ ಆಸ್ಪತ್ರೆಯ ಅಶೋಕ್ ಅವರು ಸಮಾಜದ ಕೊಡುಗೆಗಾಗಿ ಪ್ರತಿಯೊಬ್ಬರನ್ನೂ ಶ್ಲಾಘಿಸಿದರು. ವಿನೋದ್ ಶೆಣೈ ಅವರು ತಮ್ಮ ರಕ್ತದಾನ ಶಿಬಿರಗಳ ಸುದೀರ್ಘ ಅನುಭವವನ್ನು ತಿಳಿಸಿದರು. ಜೈ ತುಲುನಾಡ್ (ರಿ.) ಮಂಗಳೂರು ಘಟಕದ ಅಧ್ಯಕ್ಷ ಮನೀಷ್, ಅಶ್ವಥ್ ತುಳುವೆ ಜೈ ತುಲುನಾಡ್ (ರಿ.) ಮಾಜಿ ಅಧ್ಯಕ್ಷರು ಮತ್ತು ಸಂಘಟನೆಯ ಸದಸ್ಯರು, ರೋಷನ್ ರೋನಾಲ್ಡ್ ತುಳುಪರ ಹೋರಾಟಗಾರರು, ಸ್ಥಳೀಯ ಕಾರ್ಪೊರೇಟರ್ ರಂಜಿನಿ ಕೋಟ್ಯಾನ್, ಸಮಾಜ ಸೇವಕಿ  ಜ್ಯೋತಿ, ರಾಘವೇಂದ್ರ ಉಡುಪ,   ಜಿತೇಶ್, ನಾರಾಯಣ ಕಂಜರ್ಪಣೆ, ಭಾಸ್ಕರ್ ಸಾಲಿಯಾನ್, ಮಾಂಡೋವಿ ಮೋಟರ್ಸ್ ಎಜಿಎಂ ಅಶೋಕ್ ರಾವ್ ಮತ್ತು ಇತರೆ ಸಮಾಜ ಗಣ್ಯರು ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ಸಕ್ಷಮದ ಖಜಾಂಜಿ ಸತೀಶ್ ರಾವ್, ಮತ್ತು ಜೊತೆ ಕಾರ್ಯದರ್ಶಿಗಳಾದ ಭಾಸ್ಕರ್ ಹೊಸಮನೆ  ಮಾರ್ಗದರ್ಶನವನ್ನು ಮಾಡಿದರು.  ವಿಕಾಸಂ ಸೇವಾ ಫೌಂಡೇಶನ್, ಬಂಟ್ವಾಳದ ಆಡಳಿತ ನಿರ್ದೇಶಕ ಗಣೇಶ್ ಭಟ್ ವಾರಣಾಸಿ ಸಲಹೆ ಸೂಚನೆಗಳನ್ನು ನೀಡಿದರು. ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾಧ್ಯಕರಾದ ರಾಜಶೇಖರ ಭಟ್ ಕಾಕುಂಜೆ ವಂದಿಸಿದರು.

Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ