CM ಮೂಡುಬಿದಿರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ, ಎಕ್ಸೆಲೆಂಟ್ ನ ದಶಮಾನೋತ್ಸವ ಉದ್ಘಾಟನೆ
ಅವರು ಏ.27ರ ಬುಧವಾರ ಎಕ್ಸೆಲೆಂಟ್ ಸಂಸ್ಥೆಯವರು ಮೂಡಬಿದಿರೆಯಲ್ಲಿ ನೂತನವಾಗಿ ನಿರ್ಮಿಸಿರುವ ಭೋಜನಾಲಯ ಹಾಗೂ ಶಿಕ್ಷಣ ಸಂಸ್ಥೆಯ ದಶಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಒಮ್ಮೆ ವಿದ್ಯಾರ್ಥಿಯಾದರೆ ಸಾಯುವವರೆಗೂ
ವಿದ್ಯಾರ್ಥಿಗಳೇ. ನಿರಂತರವಾಗಿ ಕಲಿಯಬೇಕು. ಶಾಲೆಗಳಲ್ಲಿ ಮೊದಲು ಪಾಠ ನಂತರ ಪರೀಕ್ಷೆ
ಇದ್ದರೆ, ಬದುಕಿನಲ್ಲಿ ಪಾಠ, ವೇಳಾಪಟ್ಟಿ, ಪಠ್ಯಕ್ರಮವಿರುವುದಿಲ್ಲ. ಜೀವನದ
ಪರೀಕ್ಷೆಗಳಿಂದ ಪಾಠ ಕಲಿಯಲು ಸಿದ್ದರಾಗಬೇಕು. ಯಾಕೆ, ಏನು, ಎಲ್ಲಿ ಎನ್ನುವ ಪ್ರಶ್ನೆಗಳು
ತಾರ್ಕಿಕವಾಗಿ ಚಿಂತಿಸುವ ಶಕ್ತಿ ಬೆಳೆಸುತ್ತದೆ. ಪ್ರಶ್ನೆಗಳನ್ನು ಹಾಕಿಕೊಂಡು
ಜ್ಞಾನಾರ್ಜನೆ ಮಾಡಬೇಕು ಎಂದರು. ಜ್ಞಾನದ ಯುಗದಲ್ಲಿ ಉತ್ತಮವಾಗಿ ಜ್ಞಾನ ಪಡೆದು
ಯಶಸ್ವಿಯಾಗಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಎಕ್ಸೆಲೆಂಟ್
ಸಂಸ್ಥೆಯನ್ನು ನೋಡಿ ಬೆರಗಾಗಿದ್ದೇನೆ. ಗುರುಕುಲವನ್ನು ಇಷ್ಟು ಅಂದವಾಗಿ
ನಿರ್ಮಿಸಿರುವುದು ಅತ್ಯಂತ ದೊಡ್ಡ ಸಾಧನೆ. ಗುರುವಾಗಿ ಕೆಲವು ವಿದ್ಯಾರ್ಥಿಗಳಿಗೆ
ವಿದ್ಯಾರ್ಜನೆ ಮಾಡಿಸುವ ಧ್ಯೇಯದಿಂದ ಉತ್ತಮ ವಾತಾವರಣವನ್ನು ನಿರ್ಮಿಸಿದ್ದಾರೆ ಎಂದರು.
ಜೈನ
ಸಂಸ್ಕ್ರುತಿ ಅತ್ಯಂತ ಶ್ರೇಷ್ಠವಾದ ಧಾರ್ಮಿಕ ಸಂಸ್ಕ್ರುತಿ ಜೈನರದ್ದು. ತ್ಯಾಗ ಮತ್ತು
ಅಹಿಂಸೆ ಇವೆರಡೂ ಮನುಷ್ಯನಿಗೆ ಇರಬೇಕಾಗಿರುವ ನಿಜವಾದ ಗುಣಧರ್ಮಗಳು. ಆದರೆ ನಾವು
ಇವೆಲ್ಲವನ್ನೂ ಬಿಟ್ಟು ಬದುಕುವ ಪ್ರಯತ್ನ ಮಾಡುತ್ತೇವೆ. ಈ ಮೂಲಕ್ಕೆ ನಮ್ಮನ್ನು
ಸೆಳೆಯುವ ಸಂಸ್ಕೃತಿ ಜೈನ ಧರ್ಮ. ಯಾವುದನ್ನು ಪಡೆಯಲು ಸಾಧ್ಯವಿಲ್ಲವೋ ಅದನ್ನು ದಾನವಾಗಿ
ಕೊಡುವುದು ತ್ಯಾಗ. ಎಕ್ಸೆಲೆಂಟ್ ಸಂಸ್ಥಾಪಕರದ ಯುವರಾಜ್ ಜೈನ್ ಅವರ ಬಳಿ ಜ್ಞಾನವಿತ್ತು.
ಅವರಿಂದ ನೀವು ಅದನ್ನು ಪಡೆಯಲು ಸಾಧ್ಯವಿಲ್ಲ. ಅವರು ಕೊಟ್ಟಾಗ ಮಾತ್ರ ಆ ಜ್ಞಾನ ನಿಮಗೆ
ಸಿಗುತ್ತದೆ. ಯುವರಾಜ್ ಮತ್ತು ಅವರ ಶ್ರೀಮತಿ ರಶ್ಮಿಕಾ ಜೈನ್ ವಿದ್ಯಾದಾನವನ್ನು
ಮಾಡಿದ್ದಾರೆ. ಅವರ ಇಡೀ ಜೀವನವನ್ನೇ, ಸಮಯ, ಶಕ್ತಿ, ಹಣ, ವಿಚಾರವನ್ನು ತ್ಯಾಗವಾಗಿ
ಧಾರೆ ಎರೆದಿದ್ದಾರೆ.
ಸರ್ವಸ್ವವನ್ನೂ ತ್ಯಾಗ ಮಾಡಿದ ಮಹಾವೀರರ ಸಂಸ್ಕೃತಿಯಲ್ಲಿ ಬೆಳೆಯುತ್ತಿರುವುದು ಸಂತೋಷದ ಸಂಗತಿ ಎಂದರು.