
CORRUPTION: ಪಂಜಾಬ್ ಆರೋಗ್ಯ ಮಂತ್ರಿ ವಜಾ, ಬಂಧನ, 1 % ಕಮೀಷನ್ ಕೇಳಿದ್ದೇ ಕಾರಣ
Tuesday, May 24, 2022
ಶೇ.1 ಕಮೀಷನ್ ಕೇಳಿದ್ದಕ್ಕೆ ಪಂಜಾಬ್ ಆರೋಗ್ಯ ಸಚಿವ ವಿಜಯ್ ಸಿಂಗ್ಲಾ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಲಾಗಿದ್ದು, ಭ್ರಷ್ಟಾಚಾರದ ಆರೋಪದ ಮೇಲೆ ಬಂಧಿಸಲಾಗಿದೆ.
ಆಮ್ ಆದ್ಮಿ ಪಾರ್ಟಿ ಅಧಿಕಾರಕ್ಕೆ ಬಂದ ಮೇಲೆ ವಿಭಿನ್ನವಾಗಿ ಆಡಳಿತ ಮಾಡುತ್ತೇವೆ ಎಂದು ಹೇಳಿಕೊಂಡಿದ್ದ ಮುಖ್ಯಮಂತ್ರಿ ಭಗವಂತ ಮಾನ್, ಇದೀಗ ಲಂಚ, ಕಮೀಷನ್ ಆರೋಪ ಹೊತ್ತ 52 ವರ್ಷದ ವಿಜಯ್ ಅವರನ್ನೇ ವಜಾ ಮಾಡಿ, ನಾವು ಪಾರದರ್ಶಕವಾಗಿ ಆಡಳಿತ ನಡೆಸುತ್ತಿದ್ದೇವೆ ಎಂದು ಸಾರಿದರು. ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದು ಕೇವಲ ಎರಡು ತಿಂಗಳಾಗಿದೆ.