CRIME: ವಿಸ್ಮಯ ಆತ್ಮಹತ್ಯೆ ಪ್ರಕರಣ: ಪತಿ ಕಿರಣ್ ಕುಮಾರ್ ಗೆ 10 ವರ್ಷ ಜೈಲು
Tuesday, May 24, 2022
ಕೇರಳದ ವೈದ್ಯ ವಿದ್ಯಾರ್ಥಿನಿ ವಿಸ್ಮಯ (22) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೊಲ್ಲಂ ನ್ಯಾಯಾಲಯ ಆಕೆ ಪತಿ ಕಿರಣ್ ಕುಮಾರ್ ಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ
ಪ್ರಕರಣದಲ್ಲಿ ಆರೋಪಿ ಕಿರಣ್‌ಗೆ 12 ಲಕ್ಷದ ಐವತ್ತು ಸಾವಿರ ರೂಪಾಯಿ ದಂಡವನ್ನು ನ್ಯಾಯಾಲಯ ವಿಧಿಸಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 (ಬಿ), 498 (ಎ), ಮತ್ತು 306 ಮತ್ತು ವರದಕ್ಷಿಣೆ ನಿಷೇಧ ಕಾಯಿದೆಯ ಸೆಕ್ಷನ್ 3 ಮತ್ತು 4 ರ ಅಡಿಯಲ್ಲಿ ಕಿರಣ್ ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ. ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದ 22ರ ಹರೆಯದ ವಿಸ್ಮಯಾ ತನ್ನ ಗಂಡನ ಮನೆಯಿಂದ ಅನುಭವಿಸಿದ ದೈಹಿಕ ಮತ್ತು ಮಾನಸಿಕ ಹಿಂಸೆಯೇ ಆಕೆಯ ಆತ್ಮಹತ್ಯೆಗೆ ಕಾರಣವಾಯಿತು ಎಂದು ನ್ಯಾಯಾಲಯ ಗಮನಿಸಿದ್ದಾಗಿ ಹೇಳಿದೆ.