CYBERCRIME: ನಂಬರ್ ಅಪ್ಡೇಟ್ ಮಾಡುವೆನೆಂದು ಹೇಳಿ ವೈದ್ಯರ ಖಾತೆಯಿಂದ 1.65 ಲಕ್ಷ ರೂ ಎಗರಿಸಿದ ಹ್ಯಾಕರ್!!
Tuesday, May 3, 2022
ಬರೋಬ್ಬರಿ 1.65 ಲಕ್ಷ ರೂಗಳನ್ನು ಬಂಟ್ವಾಳದ ವೈದ್ಯರೊಬ್ಬರ ಬ್ಯಾಂಕ್ ಖಾತೆಯಿಂದ ಹ್ಯಾಕರ್ ಒಬ್ಬ ಎಗರಿಸಿದ್ದಾನೆ. ಅದು ಹೇಗೆ ಇಲ್ಲಿದೆ ವಿವರ.
ಮಂಗಳೂರು: ಬರೋಬ್ಬರಿ 1.65 ಲಕ್ಷ ರೂಗಳನ್ನು ಬಂಟ್ವಾಳದ ವೈದ್ಯರೊಬ್ಬರ ಬ್ಯಾಂಕ್ ಖಾತೆಯಿಂದ ಹ್ಯಾಕರ್ ಒಬ್ಬ ಎಗರಿಸಿದ್ದಾನೆ.
ಬಿ.ಸಿ.ರೋಡಿನ ವೈದ್ಯ ಡಾ. ಅಶ್ವಿನ್ ಬಾಳಿಗಾ ದೂರು ನೀಡಿದವರು. ಅವರ ಮೊಬೈಲ್ ಗೆ ಏ.29ರಂದು ಸಂಜೆ 5.30 ಗಂಟೆಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ ಜಿಯೋ ನಂಬರ್ನ್ನು ಅಪ್ಡೇಟ್ ಮಾಡುವುದಾಗಿ ತಿಳಿಸಿ ಗೂಗಲ್ ಪ್ಲೇ ಸ್ಟೋರ್ನಿಂದ ಕ್ವಿಕ್ ಈಸಿ ಆಪ್ ಅನ್ನು ಡೌನ್ಲೋಡ್ ಮಾಡಿಸಿ ನಂತರ ವೈದ್ಯರ ಮೊಬೈಲ್ ನಲ್ಲಿ ಮೈ ಜಿಯೋ ಆಪ್ ನಲ್ಲಿ 10 ರೂಪಾಯಿ ರಿಚಾರ್ಜ್ ಮಾಡಲು ತಿಳಿಸಿದ್ದಾನೆ. ಅದರಂತೆ ವೈದ್ಯರು ತನ್ನ ಬ್ಯಾಂಕ್ ಎಸ್ಬಿ ಖಾತೆ ಡೆಬಿಟ್ ಕಾರ್ಡ್ ವಿವರಗಳನು ಆಪ್ ನಲ್ಲಿ ಹಾಕಿ 10 ರೂ ರಿಚಾರ್ಜ್ ಮಾಡಿರುತ್ತಾರೆ ಕೂಡಲೇ ತನ್ನ್ ಖಾತೆಯಿಂದ 10,000ದಂತೆ 3 ಬಾರಿ ಮತ್ತು ರೂ 45,000ದಂತೆ 3 ಬಾರಿ ಅಪರಿಚಿತನ ಖಾತೆಗೆ ಒಟ್ಟು ರೂ 1,65,000 ಹಣ ವರ್ಗಾವಣೆಯಾಗಿದೆ.