NEWS: ಆಕ್ಷೇಪಕ್ಕೆ ಕಾರಣವಾಯ್ತು ಕಾಂಗ್ರೆಸ್ ಪ್ರತಿಭಟನೆ ವೇಳೆ ಪೊಲೀಸ್ ವಿರುದ್ಧ ರೇಣುಕಾ ಚೌಧರಿ ವರ್ತನೆ
ನವದೆಹಲಿ: ಕಾಂಗ್ರೆಸ್ ನ ಪರಮೋಚ್ಛ ನಾಯಕ ರಾಹುಲ್ ಗಾಂಧಿ ಅವರಿಗೆ ಸಮನ್ಸ್ ನೀಡಿದ ಜಾರಿ ನಿರ್ದೇಶನಾಲಯದ ಕ್ರಮವನ್ನು ವಿರೋಧಿಸಿ ದೇಶದಾದ್ಯಂತ ಕಾಂಗ್ರೆಸ್ ಗುರುವಾರ ಪ್ರತಿಭಟನೆಯನ್ನು ಮುಂದುವರಿಸಿತು.
ಸತತ ಮೂರು ದಿನಗಳ ವಿಚಾರಣೆಯಿಂದ ಗುರುವಾರ ರಾಹುಲ್ ಗಾಂಧಿ ಅವರಿಗೆ ವಿಚಾರಣೆಗೆ ಬಿಡುವಿತ್ತು. ಆದರೆ ಕಾಂಗ್ರೆಸ್ ಬಿಡುವಿಲ್ಲದೆ ಪ್ರತಿಭಟನೆ ನಡೆಸುತ್ತಿದೆ. ಬೆಂಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಪಂಜಾಬ್ ನ ಚಂಡಿಗಢದಲ್ಲಿ ಜಲಫಿರಂಗಿ ಬಳಸಿ ಕಾರ್ಯಕರ್ತರನ್ನು ಚದುರಿಸಲಾಯಿತು.
ತೆಲಂಗಾಣದಲ್ಲಿ ನಡೆದ
ಪ್ರತಿಭಟನೆಯಲ್ಲಿ ಸಂಸದೆ ರೇಣುಕಾ ಚೌಧರಿ ಪೊಲೀಸ್ ಕೊರಳಪಟ್ಟಿ ಹಿಡಿದಿದ್ದಾರೆ ಎಂಬ ವಿಚಾರ ಭಾರಿ ಚರ್ಚೆಗೆ
ಕಾರಣವಾಯಿತು. ಇದೀಗ ರೇಣುಕಾ ಚೌಧರಿ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಯಿತು.
ನಾನು ಸಮತೋಲನ ಕಳೆದುಕೊಳ್ಳುತ್ತಿದ್ದಾಗ ಅವರ ಮೇಲೆ ಬಿದ್ದೆ ಎಂದು ಚೌಧರಿ ಹೇಳಿಕೊಂಡರು.ಇದೀಗ ರೇಣುಕಾ ಚೌಧರಿ ವರ್ತನೆ ಕುರಿತು ಹಲವು ದೃಶ್ಯಮಾಧ್ಯಮಗಳು ವರದಿ ಮಾಡಿವೆ.