NEWS: ವಿವಾದಕ್ಕೆ ಕಾರಣವಾದ ನಟಿ ಸಾಯಿ ಪಲ್ಲವಿ ಹೇಳಿಕೆ
ಕಾಶ್ಮೀರಿ ಪಂಡಿತರ ಹತ್ಯೆಯನ್ನು ದೇಶದಲ್ಲಿ ಗೋ ರಕ್ಷಕರ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಹೋಲಿಸಿ ಮಾತನಾಡಿದ್ದಾರೆ ಎಂಬ ವಿಷಯದ ಕುರಿತು ಬಹುಭಾಷಾ ನಟಿ ಸಾಯಿಪಲ್ಲವಿ ವಿವಾದಕ್ಕೆ ಕಾರಣವಾಗಿದ್ದಾರೆ.
ವಿರಾಟ್ ಪರ್ವಂ ಸಿನಿಮಾ ಪ್ರಚಾರದ ವೇಳೆ ತೆಲುಗು ಚಿತ್ರನಟಿ ಸಾಯಿ ಪಲ್ಲವಿ ನೀಡಿದ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಸಾಯಿ ಪಲ್ಲವಿ ಹೇಳಿಕೆಗೆ ಟಿಎಸ್ ಆರ್ ಮುಖಂಡ ಬೆಂಬಲ ವ್ಯಕ್ತಪಡಿಸಿದ್ದು, ಆಕೆ ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದಾರೆ. ಟಿಎಆರ್ ಎಸ್ ಸಾಮಾಜಿಕ ಮಾಧ್ಯಮ ಸಂಚಾಲಕ ಯತೀಶ್ ರೆಡ್ಡಿ ಸಾಯಿಪಲ್ಲವಿ ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ.
ಆದರೆ ಹಲವು ಹಿಂದೂ ಪರ ಸಂಘಟನೆಗಳು ಸೇರಿದಂತೆ ಸಾಕಷ್ಟು ಜನ ವಿರೋಧ ವ್ಯಕ್ತಪಡಿಸಿದ್ದಾರೆ. ನಟಿ ಪ್ರಣೀತಾ ಸುಭಾಷ್ ವಿರೋಧಿಸಿ ಟ್ವೀಟ್ ಮಾಡಿದ್ದು, ಕಾಶ್ಮೀರಿ ಫೈಲ್ಸ್ ಚಿತ್ರವನ್ನು ಮತ್ತೊಮ್ಮೆ ವೀಕ್ಷಿಸಲಿ, ಸಂತ್ರಸ್ತರ ಅಳಲನ್ನು ನೋಡಿ, ಕೇಳಿ, ಅರ್ಥಮಾಡಿಕೊಳ್ಳಿ" ಎಂದು ಟ್ವೀಟ್ ಮಾಡಿದ್ದಾರೆ.
ನಾನು ಎಡವೂ ಅಲ್ಲ, ಬಲವೂ ಅಲ್ಲ. ದೊಡ್ಡ ಸಂಖ್ಯೆಯ ಜನರು ಸಣ್ಣ ಗುಂಪಿನ ಜನರನ್ನು ದಮನಿಸುವುದು ಸರಿಯಲ್ಲ. ಯುದ್ಧವೇನಿದ್ದರೂ ಎರಡು ಸಮಬಲದವರ ನಡುವೆಯೇ ನಡೆಯಬೇಕು ಎಂದು ಸಾಯಿ ಪಲ್ಲವಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ ಎಂಬ ಮಾತಿದು.