COURT CASE: ನ್ಯಾಯಾಂಗ ನಿಂದನೆ ಕೇಸ್: ವಿಜಯ ಮಲ್ಯಗೆ 4 ತಿಂಗಳು ಜೈಲ್, 2 ಸಾವಿರ ರೂ ದಂಡ
ನ್ಯಾಯಾಂಗ ನಿಂದನೆ ಪ್ರಕರಣವೊಂದರಲ್ಲಿ ಉದ್ಯಮಿ ವಿಜಯ ಮಲ್ಯಗೆ 4 ತಿಂಗಳು ಜೈಲು ಶಿಕ್ಷೆಯನ್ನು ಸೋಮವಾರ ಸುಪ್ರೀಂ ಕೋರ್ಟ್ ವಿಧಿಸಿದೆ. ಜೊತೆಗೆ 2 ಸಾವಿರ ರೂ ದಂಡ ವಿಧಿಸಿದ್ದು, ಅದನ್ನು ಕಟ್ಟಲು ತಪ್ಪಿದರೆ, ಮತ್ತೆ ಎರಡು ತಿಂಗಳು ಹೆಚ್ಚುವರಿಸಜೆ ಅನುಭವಿಸಬೇಕು ಎಂದಿದೆ.
ವಿದೇಶಕ್ಕೆ ವರ್ಗಾವಣೆಗೊಂಡ 40 ಮಿಲಿಯನ್ ಡಾಲರ್ ಹಣವನ್ನು 4 ವಾರದೊಳಗೆ ಮರುಪಾವತಿಸುವಂತೆ ವಿಜಯ್ ಮಲ್ಯಗೆ ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿದೆ. ದೇಶದ ವಿವಿಧ ಬ್ಯಾಂಕುಗಳಲ್ಲಿ 9000 ಕೋಟಿ ರೂ. ಸಾಲ ಮಾಡಿ ವಿದೇಶದಲ್ಲಿ ನೆಲಸಿರುವ ಮಲ್ಯನನ್ನು ಪರಾರಿ ಎಂದು ಘೋಷಿಸಲಾಗಿದೆ.
ನಾಲ್ಕು ವಾರಗಳಲ್ಲಿ ವಿದೇಶಕ್ಕೆ ವರ್ಗಾವಣೆಗೊಂಡ 40 ಮಿಲಿಯನ್ ಡಾಲರ್ ಹಣವನ್ನು ವಿಜಯ್ ಮಲ್ಯ ಪಾವತಿಸುವಂತೆ ಕೋರ್ಟ್ ಆದೇಶಿಸಿದೆ. ಸುಮಾರು 9,000 ಕೋಟಿ ರುಪಾಯಿ ಸುಸ್ತಿ ಪ್ರಕರಣದಲ್ಲಿ ವಿಜಯ್ ಮಲ್ಯ ಅವರನ್ನು ಪರಾರಿ ಎಂದು ಘೋಷಿಸಲಾಗಿದೆ.
ನ್ಯಾಯಮೂರ್ತಿ ಯು.ಯು ಲಲಿತ್ ನೇತೃತ್ವದ ಪೀಠವು ಈ ಪ್ರಕರಣದಲ್ಲಿ ಮಲ್ಯ ಅವರಿಗೆ 2000 ರೂಪಾಯಿ ದಂಡ ವಿಧಿಸಿದೆ. ಈ ಪ್ರಕರಣದಲ್ಲಿ ಶಿಕ್ಷೆಯ ಅವಧಿಯನ್ನು ನಿಗದಿಪಡಿಸುವ ನಿರ್ಧಾರವನ್ನು ನ್ಯಾಯಾಲಯವು ಮಾರ್ಚ್ 10 ರಂದು ಕಾಯ್ದಿರಿಸಿತ್ತು. ಇದಲ್ಲದೆ ಮಲ್ಯ ವಿರುದ್ಧದ ವಿಚಾರಣೆಯಲ್ಲಿ ಇನ್ನು ಮುಂದೆ ಯಾವುದೇ ಪ್ರಗತಿ ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿತ್ತು. 2017ರಲ್ಲಿ ನ್ಯಾಯಾಂಗ ನಿಂದನೆ ಆರೋಪದಡಿ ಮಲ್ಯಗೆ ಶಿಕ್ಷೆ ವಿಧಿಸಲಾಗಿತ್ತು.
The Supreme Court on Monday sentenced Vijay Mallya to four-month imprisonment in the contempt case. He was also asked to deposit 40 million USD with interest within four weeks.#ReporterDiary (@AneeshaMathur) pic.twitter.com/uqhE7vzipP
— IndiaToday (@IndiaToday) July 11, 2022