CRIME: ಟೆಂಪೊ ಟ್ರಾವೆಲರ್ ಕದ್ದೊಯ್ದ ಆರೋಪಿಗಳು ಬೆಳಗಾವಿಯಲ್ಲಿ ಸಿಕ್ಕಿಬಿದ್ದರು

CRIME: ಟೆಂಪೊ ಟ್ರಾವೆಲರ್ ಕದ್ದೊಯ್ದ ಆರೋಪಿಗಳು ಬೆಳಗಾವಿಯಲ್ಲಿ ಸಿಕ್ಕಿಬಿದ್ದರು

 


ಮಂಗಳೂರಿನ ಊರ್ವ ಪೊಲೀಸ್ ಠಾಣೆಯ ವ್ಯಾಪ್ತಿಯ ಕುಂಟಿಕಾನ ಫ್ಲೈಓವರ್ ಬಳಿಕ ಟೆಂಪೊ ಟ್ರಾವೆಲರ್ ಕಳವು ಮಾಡಿದ ಆರೋಪಿಗಳನ್ನು ಬೆಳಗಾವಿಯಲ್ಲಿ ಮಂಗಳೂರು ಪೊಲೀಸರು ಪತ್ತೆಹಚ್ಚಿದ್ದಾರೆ.

ಆರೋಪಿಗಳಾದ  ಅರೀಫ್ ಉಲ್ಲಾಖಾನ್,  ಅಮಿತ್ ಬಾಹುಬಲಿ ಪಂಚೋಡಿ ಮತ್ತು ಸುರೇಂದ್ರ ಕುಮಾರ್ ಎಂಬ ಮೂವರನ್ನು ವಶಕ್ಕೆ ಪಡೆದು  ಕಳುವಾದ ಸುಮಾರು 15 ಲಕ್ಷ ರೂ ಮೌಲ್ಯದ ಟೆಂಪೋ ಟ್ರಾವೆಲ್ಲೆರ್ ಹಾಗೂ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಸೆ.14ರಂದು ರಾತ್ರಿ ವಾಹನ ಪರ್ಕ್ ಮಾಡಿದ್ದು, ಸೆ.15ರ ಮಧ್ಯಾಹ್ನ ಕಾಣಸಿಗದಾಗ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಆರೋಪಿಗಳ ಮತ್ತು ವಾಹನದ ಪತ್ತೆಗಾಗಿ  ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್  ಆದೇಶದಂತೆ ಹಾಗೂ ಡಿಸಿಪಿ ಸಿದ್ದಾರ್ಥ್ ಗೋಯಲ್ ಮತ್ತು ಡಿಸಿಪಿ ಸಂಚಾರ ಮತ್ತು ಅಪರಾಧ ವಿಭಾಗದ ದಿನೇಶ್ ಕುಮಾರ್ ಮಾರ್ಗದರ್ಶನದಂತೆ ಹಾಗೂ ಎಸಿಪಿ  ಕೇಂದ್ರ ಉಪ ವಿಭಾಗದ ಮಹೇಶ್ ಕುಮಾರ್ ನೇತೃತ್ವದಲ್ಲಿ  ಪೊಲೀಸ್ ಠಾಣಾ ನಿರೀಕ್ಷಕರಾದ ಭಾರತಿ ಜಿ ಸಾರಥ್ಯದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು.

ಉಪ ನಿರೀಕ್ಷಕರವಾದ ಹರೀಶ್ ಎಚ್ ವಿ, ಎಎಸ್ಐ ವಿನಯ್ ಕುಮಾರ್, ಎಸ್ ಉಲ್ಲಾಸ್ ಮಹಾಲೆ,  ಪೊಲೀಸ್ ಸಿಬ್ಬಂದಿಗಳಾದ ಗಿರೀಶ್ ,ಭಾಸ್ಕರ್ ,ಅಭಿಷೇಕ್ , ಪ್ರಜ್ವಲ್  ಅವರು  ಬೆಳಗಾವಿಯಲ್ಲಿ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ.


Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ